ಇನ್‌ಸ್ಟಾಗ್ರಾಮ್ ಪ್ರಭಾವಿ ಟ್ಯಾನಿ ಭಟ್ಟಾಚಾರ್ಯ ಶಾರ್ಟ್ಸ್ ಧರಿಸಿ ಬೆಂಗಳೂರಿನಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಅವರನ್ನು ಮಹಿಳೆಯೊಬ್ಬರು ಅವಮಾನಿಸಿ ಶಾರ್ಟ್ಸ್ ಧರಿಸಿ ಬೀದಿಗೆ ಬರದಂತೆ ತಾಕೀತು ಮಾಡಿದ್ದಾರೆ. ಟ್ಯಾನಿ ಭಟ್ಟಾಚಾರ್ಯ ಅವರು ಪೋಸ್ಟ್ ಮಾಡಿದ ಈ ವೀಡಿಯೊವು ಆನ್‌ಲೈನ್‌ನಲ್ಲಿ ಬಿಸಿಬಿಸಿ ಚರ್ಚೆಯನ್ನು ಹುಟ್ಟುಹಾಕಿದೆ.
ಮಹಿಳೆ ವಾಗ್ವಾದಕ್ಕಿಳಿದು “ಇದೆಲ್ಲವನ್ನೂ ಧರಿಸಿಕೊಂಡು ತಿರುಗಾಡಬಾರದು” ಎಂಬ ಪದಗಳೊಂದಿಗೆ ಟ್ಯಾನಿ ಭಟ್ಟಾಚಾರ್ಯರನ್ನು ಎಚ್ಚರಿಸಿದ್ದಾರೆ. ಪದೇ ಪದೇ ಭಟ್ಟಾಟಾರ್ಯ ಅವರನ್ನು ವಿರೋಧಿಸಿ ಮಹಿಳೆ ಕೂಗಾಡಿದ್ದಾರೆ. ವೈರಲ್ ವಿಡಿಯೋವನ್ನ ನೆಟ್ಟಿಗರು, “ಮಹಿಳೆ ವರ್ಸಸ್ ಮಹಿಳೆ. ಬೆಂಗಳೂರಿನಲ್ಲಿ ಶಾರ್ಟ್ಸ್ ನ್ನು ಅನುಮತಿಸಲಾಗುವುದಿಲ್ಲವೇ?” ಎಂಬ ಪ್ರಶ್ನೆಯೊಂದಿಗೆ ವಯಸ್ಸಾದ ಮಹಿಳೆಯ ನಡೆ ಪ್ರಶ್ನಿಸಿದ್ದಾರೆ.
ಇನ್ ಸ್ಟಾಗ್ರಾಂನಲ್ಲಿ 120,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಯೋಗ ತರಬೇತುದಾರರಾದ ಟ್ಯಾನಿ ಭಟ್ಟಾಚಾರ್ಜಿ ಅವರು ವಿಡಿಯೋ ಪೋಸ್ಟ್ ಮಾಡಿ ಘಟನೆಯ ಬಗ್ಗೆ ತಮ್ಮ ಗೊಂದಲವನ್ನು ವ್ಯಕ್ತಪಡಿಸಿದ್ದಾರೆ. “ಏನು ಸಮಸ್ಯೆ ಎಂದು ನೀವು ಯೋಚಿಸುತ್ತೀರಿ? ಏನಾಗುತ್ತಿದೆ ಎಂದು ನನಗೆ ತಿಳಿದಿಲ್ಲ” ಎಂದು ಕೇಳಿದ್ದಾರೆ. ಕೆಲವರು ವಯಸ್ಸಾದ ಮಹಿಳೆಯ ನಡವಳಿಕೆಯನ್ನು ಖಂಡಿಸಿದ್ದಾರೆ.