ನಮ್ಮ ದೇಶದಲ್ಲಿ ಚಿತ್ರ ನಟರಿಗೆ ಎಂತೆಂಥಾ ಹುಚ್ಚು ಅಭಿಮಾನಿಗಳಿದ್ದಾರೆ ಎಂಬುದನ್ನು ನಾವು ಬಹಳಷ್ಟು ಬಾರಿ ಕೇಳಿದ್ದೇವೆ, ನೋಡಿದ್ದೇವೆ. ತೆಲುಗಿನ ನಟರಿಗಂತೂ ಈ ಅಭಿಮಾನದ ಪರಿ ಮಿಕ್ಕೆಡೆಗಳಿಗಿಂತ ಒಂದು ಕೈ ಹೆಚ್ಚೇ ಇದೆ ಅನ್ನಬಹುದು.
ಟಾಲಿವುಡ್‌ನ ಸ್ಟಾರ್ ನಟ ಪ್ರಭಾಸ್ ಮುಖ್ಯ ಭೂಮಿಕೆಯಲ್ಲಿರುವ ’ಆದಿಪುರುಷ್’ ಚಿತ್ರವು ಜೂನ್ 16ರಂದು ಹಿರಿತೆರೆಗೆ ಅಪ್ಪಳಿಸಿದೆ. ಇದೇ ವೇಳೆ ಪ್ರಭಾಸ್ ಅಭಿಮಾನಿಗಳು ಚಿತ್ರಮಂದಿರಗಳ ಮುಂದೆ ಭಾರೀ ಕರತಾಡನಗಳಿಂದ ಚಿತ್ರವನ್ನು ಬರಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಪ್ರಭಾಸ್‌ರ ಹುಚ್ಚು ಅಭಿಮಾನಿಯೊಬ್ಬ ಬಿಯರ್ ಬಾಟಲಿಯಿಂದ ತನ್ನ ಕೈ ಕೊಯ್ದುಕೊಂಡು ತನ್ನ ಮೆಚ್ಚಿನ ಚಿತ್ರನಟನ ಪೋಸ್ಟರ್‌ಗೆ ರಕ್ತದೋಕುಳಿ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಆತನ ಸುತ್ತಲೂ ಇದ್ದ ಇನ್ನಿತರ ಅಭಿಮಾನಿಗಳು ಪೋಸ್ಟರ್‌ಗಳ ಮುಂದೆ ತೆಂಗಿನ ಕಾಯಿ ಒಡೆಯುತ್ತಾ, ಢೋಲು ಬಾರಿಸುತ್ತಾ ಚಿತ್ರ ಬಿಡುಗಡೆಯನ್ನು ಆಚರಿಸುತ್ತಿರುವುದನ್ನು ನೋಡಬಹುದಾಗಿದೆ.
https://twitter.com/thedevilmonstr/status/1669521249477984256?ref_src=twsrc%5Etfw%7Ctwcamp%5Etweetembed%7Ctwterm%5E1669521249477984256%7Ctwgr%5Ee8792e0288f6e8016103736ad0533a090a3f3701%7Ctwcon%5Es1_&ref_url=https%3A%2F%2Fwww.freepressjournal.in%2Fentertainment%2Fshocking-video-die-hard-prabhas-fan-cuts-arm-with-beer-bottle-applies-blood-on-adipurush-poster