ರಾಯಚೂರು : ರಾಯಚೂರಿನಲ್ಲಿ 100 ಕ್ಕೂ ಬೆಕ್ಕುಗಳು ಹೊಸ ವೈರಸ್ ಗೆ ಬಲಿಯಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ.
ಬೆಕ್ಕುಗಳಿಗೆ FPV ಎಂಬ ಮಾರಣಾಂತಿಕ ವೈರಸ್ ತಗುಲಿದೆ , FPV ವೈರಸ್ ಗೆ ಬೆಕ್ಕುಗಳು ಸಾವನ್ನಪ್ಪಿದೆ ಎಂದು ಪಶು ವೈದ್ಯಾಧಿಕಾರಿಗಳು ಹೇಳಿದ್ದಾರೆ. FPV ಎಂಬ ಮಾರಣಾಂತಿಕ ವೈರಸ್ ಒಂದು ಬೆಕ್ಕುಗಳಿಂದ ಸುಮಾರು 10 ಬೆಕ್ಕುಗಳಿಗೆ ತಗುಲುತ್ತದೆ. ರಾಯಚೂರಿನಲ್ಲಿ ಸದ್ಯ 150 ಪ್ರಕರಣಗಳಿದ್ದು, ಬೀದಿ ಬದಿ ಬೆಕ್ಕುಗಳು ಹಾಗೂ ಮನೆ ಬೆಕ್ಕುಗಳಲ್ಲೂ ವೈರಸ್ ಪತ್ತೆಯಾಗಿದೆ.
ಈ ಸೋಂಕಿಗೆ ಯಾವುದೇ ನಿರ್ಧಿಷ್ಟ ಚಿಕಿತ್ಸೆ ಇಲ್ಲ, ಈ ಸೋಂಕು ತಗುಲಿದ 100 ಬೆಕ್ಕುಗಳಲ್ಲಿ 99 ಬೆಕ್ಕುಗಳನ್ನು ಸಾವನ್ನಪ್ಪುತ್ತದೆ. ಫೆಲೈನ್ ಪ್ಯಾನ್ಲ್ಯುಕೋಪೆನಿಯಾ ವೈರಸ್ (FPV) ಒಂದು ಪಾರ್ವೊವೈರಸ್ ಆಗಿದ್ದು, ಇದು ಪ್ರಪಂಚದಾದ್ಯಂತ ದೇಶೀಯ ಮತ್ತು ಕಾಡು ಬೆಕ್ಕು ಜಾತಿಗಳಲ್ಲಿ ಎಂಟರೈಟಿಸ್ ಮತ್ತು ಪ್ಯಾನ್ಲ್ಯುಕೋಪೆನಿಯಾವನ್ನು ಉಂಟುಮಾಡುತ್ತದೆ. ಇದು ಸಾಕು ಬೆಕ್ಕು ಮತ್ತು ಸಾಕು ನಾಯಿಗಳಿಗೂ ಹರಡುತ್ತದೆ.