‘ಗ್ರ್ಯಾಮಿ ಅವಾರ್ಡ್’ ಕಾರ್ಯಕ್ರಮದಲ್ಲಿ ರೂಪದರ್ಶಿ ಬಿಯಾಂಕಾ ಸೆನ್ಸೋರಿ ಬೆತ್ತಲಾಗಿದ್ದು, ವಿಡಿಯೋ ವೈರಲ್ ಆಗಿದೆ.
ಬಿಯಾಂಕಾ ಸೆನ್ಸೋರಿ ಮತ್ತೊಮ್ಮೆ 2025 ರ ಗ್ರ್ಯಾಮಿ ಪ್ರಶಸ್ತಿಗಳಲ್ಲಿ ಗಮನ ಸೆಳೆದರು,ಈ ಹಿಂದೆ ಕಾನ್ಯೆ ವೆಸ್ಟ್ ಎಂದು ಕರೆಯಲ್ಪಡುತ್ತಿದ್ದ ರ್ಯಾಪರ್ ಯೆ, ಗ್ರ್ಯಾಮಿ ಪ್ರಶಸ್ತಿಗಳಲ್ಲಿ ಸುದ್ದಿಯಾಗುವುದು ಹೊಸತೇನಲ್ಲ, ಆದರೆ ಅವರ ಪಾಲುದಾರ ಬಿಯಾಂಕಾ ಈ ಬಾರಿ ಎಲ್ಲರ ಗಮನ ಸೆಳೆದರು. ಖಾಸಗಿ ಅಂಗ ಕಾಣಿಸುವ ವಸ್ತ್ರ ಧರಿಸಿ ಬಂದಿದ್ದರು. ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಟೀಕೆಗೆ ಕಾರಣವಾಗಿದೆ.
ಆರಂಭದಲ್ಲಿ ಉದ್ದನೆಯ ಕಪ್ಪು ಕೋಟ್ ಧರಿಸಿದ ಮಾಡೆಲ್ ಎಲ್ಲರ ಎದುರೇ ಅದನ್ನು ತೆಗೆದುಹಾಕಿದಳು. ಪತಿ ರ್ಯಾಪರ್ ಕಾನ್ಯೆ ವೆಸ್ಟ್ ಜೊತೆ ಅವರು ಗ್ರ್ಯಾಮಿ ಅವಾರ್ಡ್’ ಕಾರ್ಯಕ್ರಮಕ್ಕೆ ಬಂದಿದ್ದರು. ರ್ಯಾಪರ್ ಕಾನ್ಯೆ ವೆಸ್ಟ್ ಅತ್ತುತ್ತಮ ರ್ಯಾಪ್ ಸಾಂಗ್ ಗೆ ನಾಮಿನೇಟ್ ಆಗಿದ್ದಾರೆ.