ಹಾವೇರಿ : ಮದುವೆಯಾಗಲು ಕನ್ಯೆ ಸಿಗಲಿಲ್ಲ ಎಂದು ಹಾವೇರಿಯಲ್ಲಿ ಯುವ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ತಾಲೂಕಿನ ಕಳ್ಳಿಹಾಳ ಗ್ರಾಮದಲ್ಲಿ ಇಂದು ಈ ಘಟನೆ ನಡೆದಿದೆ. ಮೃತರನ್ನು ಗ್ರಾಮದ ಪ್ರಕಾಶ ಬಸವರಾಜ ಹೂಗಾರ (35) ಎಂದು ಗುರುತಿಸಲಾಗಿದೆ.
ಸುಮಾರು 10-12 ವರ್ಷಗಳಿಂದ ಹುಡುಗಿ ಹುಡುಕುತ್ತಿದ್ದ ಬಸವರಾಜ ಬಹಳ ಬೇಸತ್ತಿದ್ದರು. ಆದರೆ ಇಷ್ಟು ವರ್ಷವಾದರೂ ಕನ್ಯೆ ಸಿಗಲಿಲ್ಲ ಅಂತ ಮನೆಯಲ್ಲೇ ನೇಣು ಬಿಗಿದುಕೊಂಡು ಸೂಸೈಡ್ ಮಾಡಿಕೊಂಡಿದ್ದಾರೆ. ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.