ರಾಯಚೂರು : ರಾಯಚೂರಿನಲ್ಲಿ ಹಾಡಹಗಲೇ ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, 30 ಬಾರಿಚಾಕು ಇರಿದು ವ್ಯಕ್ತಿಯನೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ರಾಯಚೂರಿನ ಬಂಗಿಕುಂಟದಲ್ಲಿ ಹಾಡಹಗಲೇ ಈ ಕೊಲೆ ನಡೆದಿದೆ.ಸಯ್ಯದ್ ಖದೀರ್ ಎಂಬುವವರನ್ನು ದುಷ್ಕರ್ಮಿಗಳು ಇರಿದು ಕೊಂದಿದ್ದಾರೆ. ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.ಹಳೇ ಧ್ವೇಷದ ಹಿನ್ನೆಲೆ ಈ ಕೊಲೆ ನಡೆದಿರಬಹುದೆಂದು ಶಂಕಿಸಲಾಗಿದೆ. ಸದರ್ ಬಜಾರ್ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.