ಬೆಂಗಳೂರು: ಅನಾರೋಗ್ಯದ ಹಿನ್ನೆಲೆಯಲ್ಲಿ ನಟ ಶಿವರಾಜ್ ಕುಮಾರ್ ಚಿಕಿತ್ಸೆಗಾಗಿ ಅಮೆರಿಕಾಗೆ ತೆರಳಿದ್ದು, ಎಲ್ಲರನ್ನೂ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಭಾವುಕರಾಗಿದ್ದಾರೆ.
ಅಮೆರಿಕಾಗೆ ತೆರಳುವ ಮುನ್ನ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಟ ಶಿವರಾಜ್ ಕುಮಾರ್, ಚಿಕಿತ್ಸೆಗಾಗಿ ಅಮೆರಿಕಾಗೆ ತೆರಳುತ್ತಿದ್ದೆನೆ. ಜನವರಿ 26ಕ್ಕೆ ವಾಪಾಸ್ ಆಗುತ್ತೇನೆ. 35 ದಿನ ಮನೆಯಿಂದ ಆಚೆಯಿರಬೇಕಲ್ಲಾ, ಅದಕ್ಕೆ ಸ್ವಲ್ಪ ದು:ಖವಾಯಿತು. ಸ್ಟಾರ್ ಗಳಾದರೂ ಎಲ್ಲೋ ಒಂದು ಭಯ ಇದ್ದೇ ಇರುತ್ತೇ ಎಂದು ಭಾವುಕರಾದರು.
ಬೆಳಿಗ್ಗೆಯಿಂದ ಮನೆಗೆ ಸಂಬಂಧಿಕರು, ಸ್ನೇಹಿತರು ಬರುತ್ತಿದ್ದರು. ಎಲ್ಲರನ್ನೂ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಎಲ್ಲರಿಗೂ ಹೊಸ ವರ್ಷದ ಶುಭಾಷಯಗಳು. ಜನವರಿ 26ಕ್ಕೆ ಬೆಂಗಳೂರಿಗೆ ವಾಪಾಸ್ ಆಗುತ್ತೇನೆ ಎಂದು ತಿಳಿಸಿದ್ದಾರೆ.