BIG NEWS: ಸಚಿವರ ಮೇಲೆ ನೋಟುಗಳ ಸುರಿಮಳೆ; ಮದುವೆಗೆ ಹೋಗಿದ್ದೂ ತಪ್ಪಾ? ಎಂದು ಪ್ರಶ್ನಿಸಿದ ಶಿವಾನಂದ ಪಾಟೀಲ್

ವಿಜಯಪುರ: ಸಚಿವ ಶಿವಾನಂದ ಪಟೇಲ್ ಮೇಲೆ ನೋಟುಗಳ ಸುರಿಮಳೆಗೈದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರಿ ಚರ್ಚೆಗೆ ಕಾರಣವಾಗಿದೆ.

ಮದುವೆ ಕಾರ್ಯಕ್ರಮಕ್ಕೆಂದು ಸಚಿವರು ಹೋಗಿದ್ದಾಗ ಅಲ್ಲಿ ನೋಟಿನ ಸುರಿಮಳೆಗೈದು ಸಚಿವರನ್ನು ಸ್ವಾಗತಿಸಲಾಗಿದೆ ಎಂದು ಹೇಳಲಾಗುತ್ತಿದೆ. ನಾಲ್ಕುದಿನಗಳ ಹಿಂದೆ ನಡೆದಿರುವ ಈ ಘಟನೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಶಿವಾನಂದ ಪಾಟೀಲ್, ನಾನು ಹೈದರಾಬಾದ್ ನಲ್ಲಿ ನಡೆದ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದೆ. ಈ ವೇಳೆ ಅಲ್ಲಿರುವ ಕ್ರಮವನ್ನು ಅವರು ಅನುಸರಿಸಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.

ನಾನು ಮದುವೆಗೆ ಹೋಗಿದ್ದೂ ತಪ್ಪಾ? ಅಲ್ಲಿಯವರ ಕ್ರಮವನ್ನು ಅವರು ಅನುಸರಿಸಿದ್ದಾರೆ. ಅದರಲ್ಲಿ ತಪ್ಪೇನಿದೆ? ಅಲ್ಲಿನ ಗೃಹ ಸಚಿವರೇ ಕಾರ್ಯಕ್ರಮಕ್ಕೆ ಬಂದಿದ್ದರು. ಅಲ್ಲಿನ ಸಂಸ್ಕೃತಿ ಅವರು ಅನುಸರಿಸಿದ್ದಾರೆ ಅದಕ್ಕೆ ನಾನೇನು ಮಾಡಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.

ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾದ ಸಚಿವ ಶಿವಾನಂದ ಪಾಟೀಲ್ ಮೇಲೆ ಹಣದ ಮಳೆಗರೆಯುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read