alex Certify ಹಬ್ಬಕ್ಕೆ ಊರಿಗೆ ಹೋಗಿ ಬಂದವರಿಗೆ ಬಿಗ್ ಶಾಕ್: ಐದು ಮನೆಯಲ್ಲಿ ಸರಣಿ ಕಳವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಬ್ಬಕ್ಕೆ ಊರಿಗೆ ಹೋಗಿ ಬಂದವರಿಗೆ ಬಿಗ್ ಶಾಕ್: ಐದು ಮನೆಯಲ್ಲಿ ಸರಣಿ ಕಳವು

ಶಿವಮೊಗ್ಗ: ಶಿವಮೊಗ್ಗದ ಬಸವನಗುಡಿಯ ಪಿಡಬ್ಲ್ಯೂಡಿ ಕ್ವಾಟ್ರಸ್‌ನಲ್ಲಿ ಸರಣಿ ಕಳ್ಳತನ ನಡೆಸಲಾಗಿದೆ. ಐದು ಮನೆಗಳಲ್ಲಿ ಕಳವು ಮಾಡಿದ್ದು, ಮತ್ತೆರಡು ಮನೆಗಳಲ್ಲಿ ಕಳ್ಳತನಕ್ಕೆ ಯತ್ನ ನಡೆದಿದೆ.

ಪೊಲೀಸ್ ಅಧಿಕಾರಿ ದೀಪಕ್, ನ್ಯಾಯಾಧೀಶರ ಕಾರ್ ಚಾಲಕ ಪ್ರಕಾಶ್, ವಾರ್ತಾ ಇಲಾಖೆ ಅಧಿಕಾರಿ ಭಾಗ್ಯ, ಡಿಸಿ ಕಚೇರಿಯ ಎಸ್‌ಡಿಎ ಸಂಧ್ಯಾ, ವಾಣಿಜ್ಯ ತೆರಿಗೆ ಇಲಾಖೆ ಕಚೇರಿಯ ಸ್ಟೆನೋ ನಂದಿನಿ ಅವರ ಮನೆಗಳಲ್ಲಿ ಕಳವು ಮಾಡಲಾಗಿದೆ. ಬೆಳಗಿನ ಜಾವ ಎರಡು ಲಕ್ಷಕ್ಕೂ ಹೆಚ್ಚು ನಗದು, 300 ಗ್ರಾಂ ಚಿನ್ನ ಕಳವು ಮಾಡಲಾಗಿದೆ.

ಮನೆಯವರು ಗಣೇಶ ಹಬ್ಬ ಮತ್ತು ಕೆಲಸದ ಮೇಲೆ ಊರಿಗೆ ಹೋಗಿದ್ದಾಗ ಸರಣಿ ಕಳ್ಳತನ ನಡೆಸಲಾಗಿದೆ. ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...