VIDEO | ತೇಜ್ ಪ್ರತಾಪ್ ಯಾದವ್ ‘ಶಿವಭಕ್ತಿ’ ಮೆಚ್ಚಿಕೊಂಡ ನೆಟ್ಟಿಗರು

ರಾಷ್ಟ್ರೀಯ ಜನತಾ ದಳ ನಾಯಕ ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಸದಾ ಸುದ್ದಿಯಲ್ಲಿರುವ ವ್ಯಕ್ತಿ. ಈಗ ತೇಜ್‌ ಪ್ರತಾಪ್‌ ಯಾದವ್‌ ಅವರ ಇನ್ನೊಂದು ವಿಡಿಯೋ ವೈರಲ್‌ ಆಗಿದೆ. ಇಷ್ಟು ದಿನ ಕೊಳಲೂದಿ, ತಲೆಗೆ ನವಿಲುಗರಿ ಹಾಕಿಕೊಂಡು ಇಲ್ಲವೆ ಹಳದಿ ಬಣ್ಣದ ಧೋತಿ ಧರಿಸಿ ಹಸುಗಳ ಸೇವೆ ಮಾಡುತ್ತಿದ್ದ ತೇಜ್‌ ಪ್ರತಾಪ್‌ ಯಾದವ್‌ ಈ ಬಾರಿ ಶಿವ ಭಕ್ತಿಯಲ್ಲಿ ಲೀನರಾಗಿದ್ದಾರೆ.

ಈಗ ವೈರಲ್‌ ಆಗಿರುವ ವಿಡಿಯೋದಲ್ಲಿ ತೇಜ್ ಪ್ರತಾಪ್ ಅವರು ಶಿವಲಿಂಗವನ್ನು ತಬ್ಬಿಕೊಂಡಿದ್ದಾರೆ. ಅವರ ಮೇಲೆ ಹಾಲು ಸೇರಿದಂತೆ ಬೇರೆ ಬೇರೆ ಅಭಿಷೇಕ ನಡೆಯುತ್ತಿದೆ. ಹಿಂದಿನಿಂದ ಹರ್‌ ಹರ್‌ ಮಹಾದೇವ್‌ ಎನ್ನುವ ಘೋಷಣೆ ಕೇಳಿ ಬರ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇದು ವ್ಯಾಪಕ ಗಮನ ಸೆಳೆದಿದ್ದು, ವಿವಿಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ತೇಜ್‌ ಪ್ರತಾಪ್‌ ಯಾದವ್‌, ಎಕ್ಸ್‌ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮಹಾದೇವನು ಪರಮ ಸತ್ಯದ ಪ್ರತೀಕ. ಮಹಾದೇವನನ್ನು ಅಪ್ಪಿಕೊಳ್ಳುವುದೆಂದರೆ ನಮ್ಮಲ್ಲೇ ಅತ್ಯಂತ ಆಳವಾದ, ಆಳವಾದ ಅಂಶಗಳನ್ನು ಅಳವಡಿಸಿಕೊಳ್ಳುವುದಾಗಿದೆ. ಅವ್ಯವಸ್ಥೆಯ ನಡುವೆ ಶಾಂತಿಯನ್ನು ಕಂಡುಕೊಳ್ಳುವುದು ಮಹಾದೇವನನ್ನು ಹುಡುಕುವುದು ಎಂದು ಶೀರ್ಷಿಕೆ ಹಾಕಿದ್ದಾರೆ.

ಅಭಿಷೇಕದ ನಂತ್ರ ತೇಜ್‌ ಪ್ರತಾಪ್‌ ಯಾದವ್‌, ಅರ್ಚಕರಿಗೆ ನಮಸ್ಕರಿಸುತ್ತಾರೆ. ನಂತ್ರ ಅವರು ದೇವರ ಪೂಜೆ ಮಾಡುತ್ತಾರೆ. ಈ ವಿಡಿಯೋವನ್ನು ಬಹುತೇಕ ಬಳಕೆದಾರರು ಇಷ್ಟಪಟ್ಟಿದ್ದಾರೆ. ಹಿಂದೂ ವಿರೋಧಿ ಮಾತುಗಳನ್ನಾಡುತ್ತಿರುವ ಆರ್‌ಜೆಡಿ ನಾಯಕರಿಗೆ ಮನವರಿಕೆ ಮಾಡಿಕೊಡುವಂತೆ ಹಲವರು ಮನವಿ ಮಾಡಿದ್ದಾರೆ. ತೇಜ್ ಪ್ರತಾಪ್ ಒಬ್ಬ ವಿಶಿಷ್ಟ ವ್ಯಕ್ತಿ ಎಂದು ಬಣ್ಣಿಸಿದ್ದಾರೆ.

https://twitter.com/TejYadav14/status/1809956733084975326?ref_src=twsrc%5Etfw%7Ctwcamp%5Etweetembed%7Ctwterm%5E1809956733084975326%7Ctwgr%5Ed3f266900f60d525f0334972c6429c1c659b1ac6%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Ftopindiannews-epaper-dh90d0f8f90ef3441695ffc4a0a4a51e7c%2Fdevotiongoesanotherleveltejpratapyadavsuniquejalabhishekritualgoesviralwatch-newsid-n621070983

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read