alex Certify ಶಿವಮೊಗ್ಗ : ವಾಹನ ಸವಾರರ ಗಮನಕ್ಕೆ , ಈ ರಸ್ತೆಯಲ್ಲಿ ಮಾರ್ಗ ಬದಲಾವಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿವಮೊಗ್ಗ : ವಾಹನ ಸವಾರರ ಗಮನಕ್ಕೆ , ಈ ರಸ್ತೆಯಲ್ಲಿ ಮಾರ್ಗ ಬದಲಾವಣೆ

ಶಿವಮೊಗ್ಗ : ರಾಷ್ಟ್ರೀಯ ಹೆದ್ದಾರಿ-369 ಕಿ.ಮೀ 509+860 ರಿಂದ 513+400 ರವರೆಗೆ ಹೊಳೆಹೊನ್ನೂರು ಪಟ್ಟಣದಲ್ಲಿನ ರಸ್ತೆಗೆ ಡಾಂಬರೀಕರಣ ಮಾಡಲು ನ.28 ರಿಂದ 30 ರವರೆಗೆ ಕಾಮಗಾರಿಯನ್ನು ನಡೆಸಬೇಕಾಗಿರುವುದರಿಂದ ಈ ಕೆಳಕಂಡಂತೆ ಬದಲಿ ರಸ್ತೆಯಲ್ಲಿ ವಾಹನಗಳು ತಾತ್ಕಾಲಿಕವಾಗಿ ಸಂಚಾರ ಮಾಡಲು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಆದೇಶಿಸಿದ್ದಾರೆ.

ಶಿವಮೊಗ್ಗದಿಂದ ಚಿತ್ರದುರ್ಗದ ಕಡೆಗೆ ಹೋಗುವ ವಾಹನಗಳು ಶಿವಮೊಗ್ಗ-ಹೊಳಲೂರು-ಮಂಗೋಟೆ-ಅರಹತೊಳಲು-ಕೈಮರ ಮೂಲಕ ಚಿತ್ರದುರ್ಗಕ್ಕೆ ಸಂಚರಿಸುವುದು. ಹಾಗೂ ಚಿತ್ರದುರ್ಗದಿಂದ ಶಿವಮೊಗ್ಗ ಕಡೆಗೆ ಬರುವ ವಾಹನಗಳು ಕೈಮರದಿಂದ ಆನವೇರಿ ರಸ್ತೆಯ ಮುಖಾಂತರ ಮಂಗೋಟೆ, ಹೊಳಲೂರು ಮಾರ್ಗವಾಗಿ ಹಾಗೂ ಕೈಮರದಿಂದ ದಾಸರಕಲ್ಲಹಳ್ಳಿ-ಅಗಸನಹಳ್ಳಿ-ನಾಗತೀಬೆಳಗಲು-ತಳ್ಳಿಕಟ್ಟೆ-ಬಾಬಳ್ಳಿ-ಭದ್ರಾವತಿ ಮುಖಾಂತರ ಶಿವಮೊಗ್ಗ ಕಡೆಗೆ ಸಂಚರಿಸುವುದು.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...