ಮೋದಿ ಸರ್ಕಾರದ ಬಜೆಟ್ ಷೇರು ಮಾರುಕಟ್ಟೆಯಲ್ಲಿ ಖುಷಿ ತಂದಂತಿಲ್ಲ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಶುರು ಮಾಡ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಏರಿಕೆ ಕಂಡು ಬಂದಿತ್ತು. ಆದ್ರೆ ಕೆಲವೇ ಕ್ಷಣಗಳಲ್ಲಿ ಷೇರು ಮಾರುಕಟ್ಟೆಯಲ್ಲಿ ಗೊಂದಲ ಸೃಷ್ಟಿಯಾಯ್ತು. ಸೆನ್ಸೆಕ್ಸ್ 1000 ಅಂಕಗಳಷ್ಟು ಇಳಿಕೆ ಕಂಡಿದೆ.
ಆರಂಭದಲ್ಲಿ 180 ಅಂಕ ಜಿಗಿದ ಸೆನ್ಸೆಕ್ಸ್, 80682ರ ಮಟ್ಟ ತಲುಪಿತ್ತು. ನಿಫ್ಟಿ 37 ಅಂಕಗಳೊಂದಿಗೆ 24546 ಅಂಕಗಳನ್ನು ತಲುಪಿತ್ತು. ಆದರೆ ಸ್ವಲ್ಪ ಸಮಯದೊಳಗೆ ಮಾರುಕಟ್ಟೆಯಲ್ಲಿ ಗೊಂದಲ ಸೃಷ್ಟಿಯಾಗಿ ಇಳಿಕೆ ಶುರುವಾಯ್ತು.
ಇಂದು ಮೋದಿ ಸರ್ಕಾರದ ಬಜೆಟ್ ಮೇಲೆ ದೊಡ್ಡ ನಿರೀಕ್ಷೆ ಇಟ್ಟುಕೊಂಡು ಶುರುವಾದ ಷೇರು ಮಾರುಕಟ್ಟೆಯಲ್ಲಿ ಬೆಳಿಗ್ಗೆ ಏರಿಕೆ ಕಂಡು ಬಂದಿತ್ತು. ಸೆನ್ಸೆಕ್ಸ್ 200ಕ್ಕೂ ಹೆಚ್ಚು ಅಂಕಗಳ ಏರಿಕೆ ದಾಖಲಿಸಿತ್ತು. ನಿಫ್ಟಿ 70 ಅಂಕಗಳ ಮೇಲಿತ್ತು. ಮಿಡ್‌ಕ್ಯಾಪ್ ಸೂಚ್ಯಂಕದಲ್ಲಿ 300 ಅಂಕಗಳ ಉತ್ತಮ ಏರಿಕೆ ಕಂಡು 222 ಅಂಕಗಳ ಏರಿಕೆಯೊಂದಿಗೆ 80,724ಕ್ಕೆ ತಲುಪಿದೆ. ನಿಫ್ಟಿ 59 ಅಂಕಗಳ ಏರಿಕೆಯೊಂದಿಗೆ 24,568ರಲ್ಲಿ ವಹಿವಾಟು ಆರಂಭಿಸಿತ್ತು.