ಬೆಂಗಳೂರು: ರೈತರ ಮಕ್ಕಳಿಗೆ ಕೃಷಿ, ಉಪ ಕಸುಬುಗಳ ತರಬೇತಿ ನೀಡಲು ಸರ್ಕಾರದಿಂದ ಸೂಚನೆ ನೀಡಲಾಗಿದೆ.
ಗುರುವಾರ ವಿಧಾನಸೌಧದಲ್ಲಿ ರೈತರ ಉತ್ಪನ್ನಗಳಿಗೆ ಏಕೀಕೃತ ಬ್ರ್ಯಾಂಡಿಂಗ್ ಒದಗಿಸುವ ಬಗ್ಗೆ ಆಯೋಜಿಸಿದ್ದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಶಾಲಿನಿ ರಜನೀಶ್ ಅವರು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಈ ಕುರಿತಾಗಿ ಸೂಚನೆ ನೀಡಿದ್ದಾರೆ.
ಬರ ಪರಿಸ್ಥಿತಿ ಸಂದರ್ಭದಲ್ಲಿ ರೈತರ ಮನೋಬಲ ಹೆಚ್ಚಿಸಲು ರೈತರ ಮಕ್ಕಳಿಗೆ ಕೃಷಿ ಯಂತ್ರೋಪಕರಣಗಳ ಬಳಕೆ, ಸುಸ್ಥಿರ ಕೃಷಿ ಉಪಕಸುಬುಗಳ ಬಗ್ಗೆ ತರಬೇತಿ ನೀಡಲು ವಿವಿಧ ಇಲಾಖೆಗಳ ಸಮನ್ವಯದಲ್ಲಿ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಮಿತಿ ರಚಿಸುವಂತೆ ತಿಳಿಸಿದ್ದಾರೆ.
ರಫ್ತು ಚಟುವಟಿಕೆಗೆ ಉತ್ತೇಜನ, ರೈತರ ಮಕ್ಕಳಿಗೆ ಕೃಷಿ, ಉಪಕಸುಬು ತರಬೇತಿ ಬಗ್ಗೆ ಸಮಗ್ರ ರೂಪುರೇಷೆ ಸಿದ್ದಪಡಿಸಿ ಅನುಷ್ಠಾನಗೊಳಿಸುವಂತೆ ಹೇಳಿದ್ದಾರೆ.