ನೋವಿ ಸ್ಯಾಡ್(ಸೆರ್ಬಿಯಾ) ಸರ್ಬಿಯಾದ ನೋವಿ ಸ್ಯಾಡ್‌ನ ರೈಲ್ವೇ ನಿಲ್ದಾಣದ ಪ್ರವೇಶದ್ವಾರದಲ್ಲಿ ಮೇಲ್ಛಾವಣಿ ಕುಸಿದು 14 ಜನರು ಸಾವನ್ನಪ್ಪಿದ್ದಾರೆ.
ರಕ್ಷಣಾ ಸಿಬ್ಬಂದಿ, ಕಾರ್ಯಕರ್ತರು ಬದುಕುಳಿದವರಿಗಾಗಿ ಕಾಂಕ್ರೀಟ್ ಮತ್ತು ತಿರುಚಿದ ಲೋಹದ ರಾಶಿಯ ಅವಶೇಷಗಳಡಿ ಹುಡುಕಾಟ ನಡೆಸಿದ್ದಾರೆ.
ಕ್ರೇನ್‌ಗಳು ಮತ್ತು ಬುಲ್ಡೋಜರ್‌ಗಳು ಡಜನ್‌ಗಟ್ಟಲೆ ರಕ್ಷಕರು ಮತ್ತು ನಿರ್ಮಾಣ ಕಾರ್ಮಿಕರೊಂದಿಗೆ ಅವಶೇಷಗಳ ಮೂಲಕ ಶೋಧ ಕಾರ್ಯ ನಡೆಸಿವೆ. ರಾಜಧಾನಿ ಬೆಲ್‌ಗ್ರೇಡ್‌ನ ವಾಯುವ್ಯಕ್ಕೆ ಸುಮಾರು 70 ಕಿಮೀ(40 ಮೈಲುಗಳು) ನಗರದಲ್ಲಿ 35-ಮೀಟರ್ (115-ಅಡಿ) ಉದ್ದದ ಛಾವಣಿಯ ಕುಸಿದು ದುರಂತ ಸಂಭವಿಸಿದೆ.