ಗಾಝಾ : ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಹಮಾಸ್ ರಾಜಕೀಯ ಬ್ಯೂರೋದ ಸದಸ್ಯ ಅಹ್ಮದ್ ಬಹಾರ್ ಸಾವನ್ನಪ್ಪಿದ್ದಾರೆ ಎಂದು ಫೆಲೆಸ್ತೀನ್ ಇಸ್ಲಾಮಿಕ್ ರೆಸಿಸ್ಟೆನ್ಸ್ ಮೂವ್ಮೆಂಟ್ (ಹಮಾಸ್) ದೃಢಪಡಿಸಿದೆ.
ಗಾಝಾದಲ್ಲಿ ಇಸ್ರೇಲಿ ವೈಮಾನಿಕ ದಾಳಿಯ ಪರಿಣಾಮವಾಗಿ ಗಾಯಗೊಂಡ ನಂತರ ಬಹಾರ್ ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಶನಿವಾರ ಹೇಳಿಕೆಯಲ್ಲಿ ತಿಳಿಸಿದೆ.
ಅಕ್ಟೋಬರ್ 7 ರಂದು ಇಸ್ರೇಲ್ನೊಂದಿಗೆ ಸಂಘರ್ಷ ಪ್ರಾರಂಭವಾದಾಗಿನಿಂದ ಹಮಾಸ್ ಅಧಿಕೃತವಾಗಿ ದೃಢಪಡಿಸಿದ ಉನ್ನತ ಶ್ರೇಣಿಯ ನಾಯಕ ಬಹಾರ್ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
74 ವರ್ಷದ ಬಹಾರ್, 2006ರಲ್ಲಿ ಫೆಲೆಸ್ತೀನ್ ಸಂಸದೀಯ ಚುನಾವಣೆಯಲ್ಲಿ ಹಮಾಸ್ ಗೆದ್ದಾಗಿನಿಂದ ಪ್ಯಾಲೆಸ್ತೀನ್ ಲೆಜಿಸ್ಲೇಟಿವ್ ಕೌನ್ಸಿಲ್ನ ಹಂಗಾಮಿ ಸ್ಪೀಕರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ, ಬಹಾರ್ ಶುರಾ ಕೌನ್ಸಿಲ್ ಮುಖ್ಯಸ್ಥ ಸೇರಿದಂತೆ ಹಲವಾರು ಹಿರಿಯ ಹಮಾಸ್ ಹುದ್ದೆಗಳನ್ನು ಅಲಂಕರಿಸಿದ್ದರು.