PUBG ಗೇಮ್ ಆಡುವ ವೇಳೆ ಆನ್ಲೈನ್ ಮೂಲಕ ಪರಿಚಿತನಾಗಿದ್ದ ಭಾರತೀಯ ಪ್ರಿಯಕರನಿಗಾಗಿ ತನ್ನ ಇಬ್ಬರು ಮಕ್ಕಳೊಂದಿಗೆ ಅಕ್ರಮವಾಗಿ ಭಾರತಕ್ಕೆ ಬಂದಿದ್ದ ಪಾಕಿಸ್ತಾನದ ಸೀಮಾ ಹೈದರ್ ಗೆ ಬಾಲಿವುಡ್ ನಿರ್ದೇಶಕರೊಬ್ಬರು ಬಂಪರ್ ಆಫರ್ ನೀಡಿದ್ದಾರೆ.
ಭಾರತೀಯ ಪ್ರಿಯಕರ ಸಚಿನ್ ಜೊತೆ ವಿವಾಹವಾಗಿರುವ ಸೀಮಾ ಇತ್ತೀಚೆಗಷ್ಟೇ ವಿಡಿಯೋ ಒಂದನ್ನು ಮಾಡಿ ತನ್ನ ಕುಟುಂಬದ ಆರ್ಥಿಕ ಸಂಕಷ್ಟವನ್ನು ಹೇಳಿಕೊಂಡಿದ್ದರು. ಈ ವಿಡಿಯೋ ವೈರಲ್ ಆದ ಬಳಿಕ ಬಾಲಿವುಡ್ ನಿರ್ದೇಶಕರು ತಮ್ಮ ಮುಂದಿನ ಸಿನಿಮಾದಲ್ಲಿ ನಟಿಸುವ ಅವಕಾಶ ನೀಡುವುದಾಗಿ ಹೇಳಿದ್ದಾರೆ.
ಇದರ ಜೊತೆಗೆ ಗುಜರಾತ್ ಕಂಪನಿಯೊಂದು ಸೀಮಾ ಪತಿ ಸಚಿನ್ ಗೆ ಕೆಲಸದ ಆಫರ್ ನೀಡಿದ್ದು, ರಿಜಿಸ್ಟರ್ಡ್ ಪೋಸ್ಟ್ ಮೂಲಕ ಸಚಿನ್ ಮನೆಗೆ ಪತ್ರವನ್ನು ಕಳುಹಿಸಲಾಗಿದೆ. ಬಯಸಿದರೆ ಸೀಮಾ ಹಾಗೂ ಸಚಿನ್ ಅವರಿಗೆ ವಾರ್ಷಿಕ 6 ಲಕ್ಷ ರೂಪಾಯಿ ಪ್ಯಾಕೇಜ್ ನ ಉದ್ಯೋಗ ನೀಡುವ ಭರವಸೆಯನ್ನು ಈ ಪತ್ರದಲ್ಲಿ ನೀಡಲಾಗಿದೆ.