ಭಾರತದಲ್ಲಿನ ಪ್ರವಾಸಿ ತಾಣಗಳು ಸ್ವಚ್ಛವಾಗಿರುವುದಿಲ್ಲ. ವಿದೇಶಗಳಲ್ಲಿ ಕ್ಲೀನಿಂಗ್ ಹೆಚ್ಚು ಅಂತ ಮೂದಲಿಸುವವರಿಗೆ ಇಲ್ಲಿದೆ ಉತ್ತರ.
ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಸುಸಂತ ನಂದಾ ಅವರು ಒಡಿಶಾದ ಗೋಲ್ಡನ್ ಬೀಚ್‌ನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಇದು ಭಾರತದ ಸ್ವಚ್ಛ ಬೀಚ್‌ಗಳಲ್ಲಿ ಒಂದಾಗಿದ್ದು ಯಾವಾಗಲೂ ಕ್ಲೀನ್ ಆಗಿರುತ್ತದೆ. ಕಡಲತೀರದ ಚಿತ್ರಗಳು ಮನಮೋಹಕವಾಗಿದ್ದು, ನೆಟ್ಟಿಗರ ಗಮನ ಸೆಳೆದಿವೆ.
“ಪುರಿಯಲ್ಲಿರುವ ಗೋಲ್ಡನ್ ಬೀಚ್ ಅನ್ನು ಭಾರತದ ಸ್ವಚ್ಛ ಬೀಚ್ ಎಂದು ಗುರ್ತಿಸಲಾಗಿದೆ. ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಬ್ಲೂ ಫ್ಲ್ಯಾಗ್ ಬೀಚ್ ಎಂದು ಪ್ರಮಾಣೀಕರಿಸಲಾಗಿದೆ. ಟಾರ್ಚ್‌ಲೈಟ್‌ಗಳ ಅಡಿಯಲ್ಲಿಯೂ ಇದನ್ನು ಸಾಧ್ಯವಾಗಿಸಿದ ಸಿಬ್ಬಂದಿಗೆ ವಂದನೆಗಳು” ಎಂದು ಅವರು ಪೋಸ್ಟ್ ಗೆ ಶೀರ್ಷಿಕೆ ನೀಡಿದ್ದಾರೆ.
ಒಂದು ಚಿತ್ರದಲ್ಲಿ ಸಿಬ್ಬಂದಿ ಟಾರ್ಚ್ ಹಿಡಿದು ಬೀಚ್ ಸ್ವಚ್ಛಗೊಳಿಸುತ್ತಿರುವುದನ್ನ ಕಾಣಬಹುದು.