BIG NEWS: ಗಣರಾಜ್ಯೋತ್ಸವ ಪರೇಡ್ ವೇಳೆ ಸಿಎಂ ಬಳಿ ನುಗ್ಗಿದ ವ್ಯಕ್ತಿ; ಆರೋಪಿ ವಿರುದ್ಧ ಎಫ್ ಐ ಆರ್ ದಾಖಲು

ಬೆಂಗಳೂರು: ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆ ವೇಳೆ ಸಿಎಂ ಸಿದ್ದರಾಮಯ್ಯ ಬಳಿ ಏಕಾಏಕಿ ನುಗ್ಗಿದ ಅಪರಿಚಿತ ವ್ಯಕ್ತಿ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ಗಣರಾಜ್ಯೋತ್ಸವದ ಪರೇಡ್ ವೇಳೆ ವ್ಯಕ್ತಿಯೋರ್ವ ಭದ್ರತಾ ಸಿಬ್ಬಂದಿಗಳನ್ನು ತಳ್ಳಿ ಏಕಾಏಕಿ ಸಿಎಂ ಸಿದ್ದರಾಮಯ್ಯ ಇರುವತ್ತ ಧಾವಿಸಿದ್ದ. ತಕ್ಷಣ ಪೊಲೀಸರು ಆತನನ್ನು ಹಿಡಿದು ವಿಚಾರಣೆ ನಡೆಸಿದ್ದರು. ಆತ ಮೈಸೂರು ಮೂಲದ ಪರಶುರಾಮ್ ಎಂದು ತಿಳಿದುಬಂದಿದ್ದು, 1993ರಲ್ಲಿ ಕೆಪಿಎಸ್ ಸಿ ಪರೀಕ್ಷೆ ಬರೆದಿದ್ದ. ಆದರೆ ಪರೀಕ್ಷೆ ಫಲಿತಾಂಶವನ್ನು ಸರ್ಕಾರ ತಡೆ ಹಿಡಿದಿದೆ ಇದರಿಂದ ಬೇಸತ್ತು ಸಿಎಂ ಗೆ ಮನವಿ ಕೊಡಲು ಬಂದಿದ್ದ.

ಮೊದಲು ಸಿಎಂ ಗಮನ ಸೆಳೆಯಲು ಪತ್ರ ಪ್ರದರ್ಶಿಸಿದ್ದಾನೆ. ಆದರೂ ಸಿಎಂ ಆತನತ್ತ ಗಮನ ಹರಿಸದಿದ್ದಾಗ ಏಕಾಏಕಿ ಸಿಎಂ ಸಿದ್ದರಾಮಯ್ಯ ಅವರತ್ತ ನುಗ್ಗಿದ್ದಾನೆ. ಸದ್ಯ ಪರಶುರಾಮ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಸಾರ್ವಜನಿಕರಲ್ಲಿ ಆತಂಕ, ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಆತನ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read