ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ಶಾಲಾ ಸಮಯ ಪರಿಷ್ಕರಣೆ ಕುರಿತಾಗಿ ಸಮಾಲೋಚನೆ ನಡೆಸಲು ಅ. 5ರಂದು ನಿಗದಿಯಾಗಿದ್ದ ಸಭೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅ. 9ಕ್ಕೆ ಮುಂದೂಡಿದೆ.
ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ನೇತೃತ್ವದಲ್ಲಿ ನಿಗದಿಯಾಗಿದ್ದ ಶಾಲಾ ಸಮಯ ಬದಲಾವಣೆ ಕುರಿತ ಸಮಾಲೋಚನಾ ಸಭೆಯನ್ನು ಕಾರಣಾಂತರಗಳಿಂದ ಮುಂದೂಡಲಾಗಿದ್ದು, ಅ. 9ರಂದು ಮಧ್ಯಾಹ್ನ 3:30ಕ್ಕೆ ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿ ಸಭಾಂಗಣದಲ್ಲಿ ನಡೆಸಲಾಗುವುದು.
ಆಹ್ವಾನಿತ ಶಿಕ್ಷಕರ ಸಂಘಟನೆಗಳು, ಖಾಸಗಿ ಶಾಲಾ ಸಂಘಟನೆಗಳು, ಪೋಷಕರ ಸಂಘಟನೆಗಳ ಪ್ರತಿನಿಧಿಗಳು ಸಭೆಗೆ ಆಗಮಿಸುವಂತೆ ಕೋರಲಾಗಿದೆ.