ಬೆಂಗಳೂರು : 2022-23 ನೇ ಸಾಲಿನ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು/ತತ್ಸಮಾನ ವೃಂದದ ಶಿಕ್ಷಕರು ಹಾಗೂ ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕರು/ತತ್ಸಮಾನ ವೃಂದ ಶಿಕ್ಷಕರ ಅಂತರ್ ವಿಭಾಗ ಮಟ್ಟದ ಕೋರಿಕೆ/ಪರಸ್ಪರ ವರ್ಗಾವಣೆಗೆ ಕೌನ್ಸೆಲಿಂಗ್ ವೇಳಾಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆ ಪ್ರಕಟಿಸಿದೆ.
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು [ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮ-2020 [2020 ರ ಕರ್ನಾಟಕ ಅಧಿನಿಯಮ ಸಂಖ್ಯೆ: 04) ಹಾಗೂ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ)ನಿಯಮಗಳು- 2020ರ ನಿಯಮಗಳಂತೆ, ಹಾಗೂ ವರ್ಗಾವಣಾ ತಿದ್ದುಪಡಿ ಕಾಯ್ದೆ ಮತ್ತು ನಿಯಮ-2022ರ ಪ್ರಕಾರ ಉಲ್ಲೇಖ-Iರಲ್ಲಿನ ಮಾರ್ಗಸೂಚಿಯನ್ವಯ ಸರ್ಕಾರದ ಆದೇಶದಂತೆ, ಉಲ್ಲೇಖ-2ರಲ್ಲಿ ವರ್ಗಾವಣಾ ವೇಳಾಪಟ್ಟಿಯನ್ನು ಪ್ರಕಟಿಸಲಾಗಿರುತ್ತದೆ.
ಪ್ರಾಥಮಿಕ ಶಾಲಾ ಶಿಕ್ಷಕರು 4022 ಪ್ರೌಢಶಾಲಾ ಶಿಕ್ಷಕರು 964, ಪ್ರೌಢಶಾಲಾ ಮುಖ್ಯಶಿಕ್ಷಕರು ಮತ್ತು ತತ್ಸಮಾನ ವೃಂದದ ಶಿಕ್ಷಕರು, 267 ಇದ್ದು, ಒಟ್ಟಾರೆ 5253 ಆಗುತ್ತಿದೆ. ಪ್ರತಿದಿನ 300 ರಿಂದ 400 .ಶಿಕ್ಷಕರ ಕೌನ್ಸೆಲಿಂಗ್ ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ ಶಿಕ್ಷಕರುಗಳನ್ನು ರಾಜ್ಯ ಮಟ್ಟದ ಕೌನ್ಸಿಲಿಂಗ್‌ಗೆ ಕರೆಸುವ ಬದಲು, ಶಿಕ್ಷಕರ ಹಿತದೃಷ್ಟಿಯಿಂದ ಆಯಾ ಜಿಲ್ಲೆಗಳಲ್ಲಿ ಕೌನ್ಸಿಲಿಂಗ್‌ಗೆ ಹಾಜರಾಗಿ ಸ್ಥಳ ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಇಲ್ಲಿದೆ ವೇಳಾಪಟ್ಟಿ