ಪದವಿ ಪ್ರದಾನ ಸಮಾರಂಭದಲ್ಲೇ ಸ್ನೇಹಿತನ ಮೇಲೆ WWE ಪಟ್ಟು; ವಿದ್ಯಾರ್ಥಿ ವಿಡಿಯೋ ವೈರಲ್

ಡಬ್ಲ್ಯೂಡಬ್ಲ್ಯೂಎಫ್ (ವಿಶ್ವ ಕುಸ್ತಿ ಫೆಡರೇಷನ್) ಬಹುತೇಕ ಎಲ್ಲ ಗಂಡು ಮಕ್ಕಳಿಗೂ ಬಾಲ್ಯದಲ್ಲಿ ಒಮ್ಮೆಯಾದಾರೂ ಇಷ್ಟವಾದ ಆಟ. ಕೆಲವರಿಗೆ ಈ ಆಟ ದೊಡ್ಡವರಾದ ಮೇಲೂ ಇಷ್ಟವಾಗಿಯೇ ಉಳಿಯುತ್ತದೆ.

ಕಾಲೇಜೊಂದರ ಪದವಿ ಪ್ರದಾನ ಸಮಾರಂಭವೊಂದರ ವೇಳೆ ವಿದ್ಯಾರ್ಥಿಯೊಬ್ಬ ತನ್ನ ಪದವಿ ಪ್ರದಾನದ ಸಂತಸದ ಕ್ಷಣವನ್ನು ಸಂಭ್ರಮಿಸಲು ಹೀಗೊಂದು ಫನ್ನಿ ಕೆಲಸ ಮಾಡಿದ್ದಾನೆ.

ಇದೇ ಸಮಾರಂಭದಲ್ಲಿ ಪದವಿ ಪಡೆದ ತನ್ನ ಮಿತ್ರನೊಬ್ಬನಿಗೆ ಡಬ್ಲ್ಯೂಡಬ್ಲ್ಯೂಎಫ್‌ ಶೈಲಿಯಲ್ಲಿ ಕುಸ್ತಿ ಪಟ್ಟು ಹಾಕುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ.

ಕುಸ್ತಿ ಪಟು ರ‍್ಯಾಂಡಿ ಓರ್ಟನ್‌ನ ಟ್ರೇಡ್‌ಮಾರ್ಕ್ ಪಟ್ಟೊಂದನ್ನು ಈ ವಿದ್ಯಾರ್ಥಿ ಈ ಸಂದರ್ಭದಲ್ಲಿ ತೋರುತ್ತಾನೆ.

ಇದೇ ವೇಳೆ ಅಲ್ಲಿಯೇ ಇದ್ದ ಈ ಇಬ್ಬರ ಸ್ನೇಹಿತನೊಬ್ಬ ತೀರ್ಪುಗಾರನಂತೆ ನಟಿಸುತ್ತಾನೆ. ಪದವಿ ಪ್ರದಾನ ಸಮಾರಂಧ ಯಾಕೋ ಗಾಂಭೀರ್ಯತೆ ಕಳೆದುಕೊಳ್ಳುತ್ತಿದೆ ಎನಿಸಿದಂತೆ ಕಂಡ ಕೂಡಲೇ ಶಿಕ್ಷಕರೊಬ್ಬರು ವಿದ್ಯಾರ್ಥಿಗಳಿಗೆ ತಂತಮ್ಮ ಜಾಗಕ್ಕೆ ಹೋಗಿ ಕೂರಲು ಸೂಚಿಸುತ್ತಾರೆ.

’ಹುಡುಗರು ಯಾವಾಗಲೂ ಹುಡುಗರೇ’ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.

https://twitter.com/shannonsharpeee/status/1669369363634475009?ref_src=twsrc%5Etfw%7Ctwcamp%5Etweetembed%7

https://twitter.com/ParioPraxis/status/1669387908241817600?ref_src=twsrc%5Etfw%7Ctwcamp%5Etweetembed%7Ctwterm%5E1669387908241817600%7Ctwgr%5E54276c39536d2726b2f833919dc4504f7f2f0f61%7Ctwcon%5Es1_&ref_url=https%3A%2F%2Fwww.freepressjournal.in%2Feducation%2Fwatch-school-graduation-ceremony-turns-into-wwe-ring-student-hits-rko-on-friend-user-comments-boys-will-be-boys

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read