ಬೆಂಗಳೂರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ಗಳಲ್ಲಿ ಸರ್ಕಾರಿ ಇಲಾಖೆಗಳ ಖಾತೆಗಳನ್ನು ಕ್ಲೋಸ್ ಮಾಡುವಂತೆ ಸರ್ಕಾರ ಆದೇಶಿಸಿದ ಬೆನ್ನಲ್ಲೇ 22.76 ಕೋಟಿ ರೂ.ಗಳನ್ನು ಈ ಬ್ಯಾಂಕುಗಳು ಸರ್ಕಾರಕ್ಕೆ ಪಾವತಿಸಿವೆ.
ಎಸ್ಬಿಐ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ಗಳಿಂದ. ಸಮರ್ಪಕವಾಗಿ ವ್ಯವಹಾರವಾಗದ ಹಿನ್ನೆಲೆಯಲ್ಲಿ ಸರ್ಕಾರಿ ಇಲಾಖೆಗಳು, ನಿಗಮ – ಮಂಡಳಿಗಳ ಖಾತೆಯನ್ನು ಮುಚ್ಚಬೇಕು. ಆಯಾ ಬ್ಯಾಂಕುಗಳ ಮೂಲಕ ಯಾವುದೇ ವ್ಯವಹಾರ ನಡೆಸಿದಂತೆ ಆರ್ಥಿಕ ಇಲಾಖೆ ಆದೇಶ ನೀಡಿದ್ದು, ಇದರಿಂದ ಎಚ್ಚೆತ್ತುಕೊಂಡ ಬ್ಯಾಂಕುಗಳು ತಮ್ಮಲ್ಲಿದ್ದ ಹಣದ ಜೊತೆಗೆ ಬಡ್ಡಿ ಸೇರಿಸಿ 22.76 ಕೋಟಿ ರೂ.ಗಳನ್ನು ಚೆಕ್ ಮೂಲಕ ಸರ್ಕಾರಕ್ಕೆ ಪಾವತಿಸಿವೆ.
ಎಸ್ಬಿಐನಿಂದ 9.67 ಕೋಟಿ ರೂ. ಪಾವತಿಯಾಗಿದ್ದು, ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿಂದ 13.09 ಕೋಟಿ ರೂ. ಪಾವತಿಸಲಾಗಿದೆ.