ವೀಕೆಂಡ್ಗೊಂದು ಒಳ್ಳೆಯ ಜಾಗ ಹುಡುಕಬೇಕು ಅಂತಿದ್ರೆ ರಾಜಧಾನಿ ಬೆಂಗಳೂರಿನಿಂದ ಕೇವಲ 33 ಕಿಲೋಮೀಟರ್ ದೂರದಲ್ಲಿರೋ ಸಾವನದುರ್ಗಕ್ಕೆ ನೀವು ಭೇಟಿ ನೀಡಬಹುದು. ಪ್ರಪಂಚದಲ್ಲೇ ಅತ್ಯಂತ ದೊಡ್ಡ ಏಕಶಿಲಾ ಬೆಟ್ಟ ಎಂಬ ಖ್ಯಾತಿ ಈ ಸ್ಥಳಕ್ಕಿದೆ. ಇದು ಮಾತ್ರವಲ್ಲದೇ ಡೇವಿಡ್ ಲೀನ್‌ನ ಚಲನಚಿತ್ರ ಎ ಪಾಸೇಜ್ ಟು ಇಂಡಿಯಾದ ಚಿತ್ರೀಕರಣವನ್ನೂ ಇಲ್ಲಿ ಮಾಡಲಾಗಿದೆ.
ಸಾವನದುರ್ಗ ಬೆಟ್ಟಕ್ಕೆ ಸ್ಥಳೀಯರು ಕರಿಗುಡ್ಡ ಹಾಗೂ ಬಿಳಿ ಗುಡ್ಡ ಎಂತಲೂ ಕರೀತಾರೆ. ಇದು ಹೊಯ್ಸಳ ಕಾಲದ ಬೆಳಕಿಗೆ ಬಂದ ಬೆಟ್ಟ ಎಂದು ಹೇಳಲಾಗುತ್ತೆ. ಮಾಗಡಿ ಗವರ್ನರ್ ಆಗಿದ್ದ ಸಾಮಂತರಾಯನಿಗೆ ಸೇರಿದ ಸಾಮಂತದುರ್ಗದಿಂದ ಹುಟ್ಟಿಕೊಂಡಿದೆ ಎಂದು ಹೇಳಲಾಗುತ್ತೆ. ಮೈಸೂರು ಈ ಸ್ಥಳವನ್ನ ವಶಪಡಿಸಿಕೊಂಡ ಬಳಿಕ ದಳವಾಯಿ ದೇವರಾಜ ನೆಲಪಟ್ಟಣದಲ್ಲಿ ಅರಮನೆ ನಿರ್ಮಿಸಿದ್ದರು. ಮೂರನೇ ಆಂಗ್ಲೋ – ಮೈಸೂರು ಯುದ್ಧದ ಸಂಭ್ರಮದಲ್ಲಿ ರಾಬರ್ಟ್ ಹೋಮ್ ಇದಕ್ಕೆ ಸಾವಿನದುರ್ಗ( ಫೋರ್ಟ್ ಆಫ್ ಡೆತ್) ಎಂದು ಕರೆದಿದ್ದಾರೆ.
ಸಾವನದುರ್ಗ ಬೆಟ್ಟಕ್ಕೆ ಯಾತ್ರಾರ್ಥಿಗಳು ಭೇಟಿ ಕೊಡ್ತಾನೇ ಇರ್ತಾರೆ. ಬೆಟ್ಟದ ಬುಡದಲ್ಲಿ ಸಾವಂದಿ ವೀರಭದ್ರೇಶ್ವರ ಸ್ವಾಮಿ ಹಾಗೂ ನರಸಿಂಹ ಸ್ವಾಮಿ ದೇವಸ್ಥಾನವಿದೆ. ಬೆಟ್ಟದ ನಿರ್ಮಲ ವಾತಾವರಣ ಪ್ರವಾಸಿಗರಿಗೆ ಮುದ ನೀಡುತ್ತದೆ.
ಬೆಂಗಳೂರಿನ ಮೆಜೆಸ್ಟಿಕ್ನಿಂದ ಮಾಗಡಿ ರಸ್ತೆಗೆ ಹೋಗುವ ಬಸ್ನಲ್ಲಿ ಪ್ರಯಾಣಿಸುವ ಮೂಲಕ ಈ ಜಾಗಕ್ಕೆ ತಲುಪಬಹುದು. ಮಾಗಡಿ ರಸ್ತೆ ಜಂಕ್ಷನ್ನಲ್ಲಿ ಇಳಿದು ಸಾವನದುರ್ಗಕ್ಕೆ ಹೋಗಲು ಖಾಸಗಿ & ಕೆಎಸ್ಆರ್ಟಿಸಿ ಬಸ್ಗಳು ಸಿಗುತ್ತವೆ. ಬೆಂಗಳೂರಿನಿಂದ 2 ಗಂಟೆ ಪ್ರಯಾಣಿಸಿದ್ರೆ ನೀವು ಈ ಸ್ಥಳಕ್ಕೆ ತಲುಪಬಹುದು.