ಯತಿರಾಜ್ ನಿರ್ದೇಶನದ ‘ಸಂಜು’ ಚಿತ್ರದ ‘ಮಿಟಿಕ್ ಲಾಡಿ’ ಎಂಬ ಐಟಂ ಸಾಂಗ್ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು, ಧೂಳೆಬ್ಬಿಸಿದೆ ನವೀನ್ ಸಜ್ಜು ಧ್ವನಿಯಲ್ಲಿ ಮೂಡಿ ಬಂದಿರುವ ಈ ಹಾಡಿಗೆ ಗಾನಪ್ರಿಯರು ಫಿದಾ ಆಗಿದ್ದಾರೆ. ನಿತಿನ್ ಶಿವರಾಮ್ ಸಂಗೀತ ಸಂಯೋಜನೆ ನೀಡಿದ್ದು, ದಿನೇಶ್ ಬಿ ರಾಜ್ ಸಾಹಿತ್ಯ ಬರೆದಿದ್ದಾರೆ.
ದಿಶಾ ಎಂಟರ್ಪ್ರೈಸಸ್ ಬ್ಯಾನರ್ ನಲ್ಲಿ ಸಂತೋಷ್ ಡಿಎಂ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಮನ್ವಿತ್, ಶ್ರಾವ್ಯ ಹಾಗೂ ಸಂಗೀತ ಪ್ರಮುಖ ಪಾತ್ರದಲ್ಲಿದ್ದಾರೆ. ವಿಜಯ್ ಹರಿತ್ಸ ಸಂಗೀತ ಸಂಯೋಜನೆ ನೀಡಿದ್ದು, ಸಂಜೀವ್ ರೆಡ್ಡಿ ಮತ್ತು ಜೀವನ್ ಅವರ ಸಂಕಲನ, ವಿದ್ಯಾ ನಾಗೇಶ್ ಛಾಯಾಗ್ರಹಣ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಹಾಗೂ ಮದನ್ ಹರಿಣಿ ನೃತ್ಯ ನಿರ್ದೇಶನವಿದೆ.