
ಅದಾಗ್ಯೂ ಹಠಾತ್ ಪ್ರವಾಹದಿಂದ ಕಂಗಾಲಾಗದ ದಂಪತಿ ಕಾರ್ ನಿಂದ ಹೊರಬಂದು ಅದರ ಮೇಲೆ ಕುಳಿತು ಪರಿಸ್ಥಿತಿಯನ್ನು ಎದುರಿಸಿದರು. ಸುತ್ತಲೂ ಪ್ರವಾಹದ ನೀರು ಹರಿದುಹೋಗುತ್ತಿದ್ದರೂ ದಂಪತಿ ಸಮಾಧಾನಕರವಾಗಿ ಕಾರ್ ನ ಮೇಲೆ ಕುಳಿತಿರುವ ವಿಡಿಯೋ ವೈರಲ್ ಆಗಿ ಗಮನ ಸೆಳೆಯುತ್ತಿದೆ.
ಐದಾರ್ ತಾಲೂಕಿನ ವಡಿಯಾವಿರ್ ಭೂತಿಯ ಬಳಿ ಈ ಘಟನೆ ನಡೆದಿದೆ. ನದಿ ದಾಟುತ್ತಿದ್ದಾಗ ಜೋರಾದ ಪ್ರವಾಹಕ್ಕೆ ದಂಪತಿಯ ಕಾರು ಸಿಕ್ಕಿಹಾಕಿಕೊಂಡಿತು. ನೀರಿನಲ್ಲಿ ಕೊಚ್ಚಿಹೋಗುವುದನ್ನು ತಪ್ಪಿಸಲು ಅವರಿಗೆ ಕಾರ್ ನ ಛಾವಣಿಯ ಮೇಲೆ ಹತ್ತುವುದನ್ನು ಬಿಟ್ಟು ಬೇರೆ ದಾರಿಯಿರಲಿಲ್ಲ. ಗಂಟೆಗಳ ಕಾಲ ಅವರು ಪ್ರವಾಹದಲ್ಲಿ ಸಿಲುಕಿ ಪಟ್ಟುಬಿಡದೇ ನೀರಿನ ಅಲೆಗಳನ್ನು ಎದುರಿಸಿದರು.
ದಂಪತಿಯ ಅಪಾಯಕಾರಿ ಪರಿಸ್ಥಿತಿಯನ್ನು ಕಂಡ ಸ್ಥಳೀಯ ನಿವಾಸಿಗಳು ಸಹಾಯ ಮಾಡಲು ಪ್ರಯತ್ನಿಸಿದರು ಆದರೆ ವೇಗವಾಗಿ ಹರಿಯುವ ನೀರಿನಿಂದ ಅವರನ್ನು ತಲುಪಲು ಸಾಧ್ಯವಾಗಲಿಲ್ಲ. ಬಲವಾದ ನದಿಯ ಪ್ರವಾಹದಿಂದ ರಕ್ಷಣಾ ಕಾರ್ಯಾಚರಣೆಯು ಮತ್ತಷ್ಟು ಜಟಿಲವಾಗಿ ರಕ್ಷಕರಿಗೆ ಸುರಕ್ಷಿತವಾಗಿ ಕಾರನ್ನು ಸಮೀಪಿಸಲು ಕಷ್ಟವಾಯಿತು.
ಪರಿಸ್ಥಿತಿ ಹೆಚ್ಚು ಗಂಭೀರವಾಗುತ್ತಿದ್ದಂತೆ ಸ್ಥಳೀಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಯಿತು. ಇದಾರ್ ಮತ್ತು ಹಿಮ್ಮತ್‌ನಗರದಿಂದ ಅಗ್ನಿಶಾಮಕ ದಳದ ತಂಡಗಳನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಯಿತು. ರಕ್ಷಣಾ ತಂಡ, ಸ್ಥಳೀಯ ಆಡಳಿತದ ಅಧಿಕಾರಿಗಳು, ಪೊಲೀಸರು ಮತ್ತು ಸ್ಥಳೀಯ ಜನರು ಸಮನ್ವಯದಿಂದ ದಂಪತಿಯನ್ನು ರಕ್ಷಿಸುವ ಕೆಲಸ ಮಾಡಿದರು.
ನೀರಿನ ಹರಿವು ಕಡಿಮೆಯಾಗುವವರೆಗೆ ಕಾದು ದಂಪತಿಯನ್ನು ತಲುಪಿ ಅವರನ್ನು ಸುರಕ್ಷಿತವಾಗಿ ದಡಕ್ಕೆ ಕರೆತರುವಲ್ಲಿ ಯಶಸ್ವಿಯಾದರು. ಅದೃಷ್ಟವಶಾತ್ ಅವರಿಗೆ ಯಾವುದೇ ಗಾಯಗಳಾಗಿಲ್ಲ.