ಜನಪ್ರಿಯ ಪಾಡ್‌ಕ್ಯಾಸ್ಟರ್ ಮತ್ತು ಯೂಟ್ಯೂಬರ್ ಬೀರ್‌ಬಿಸೆಪ್ಸ್ ಆಯೋಜಿಸಿದ್ದ ದಿ ರಣವೀರ್ ಶೋ ಪಾಡ್‌ಕ್ಯಾಸ್ಟ್‌ನ ಇತ್ತೀಚಿನ ಸ್ವಾತಂತ್ರ್ಯ ದಿನದ ಸಂಚಿಕೆಯಲ್ಲಿ ಪಾಲ್ಗೊಂಡಿದ್ದ ತೆಹ್ಸೀನ್ ಪೂನವಾಲಾ ಅವರು ಇಸ್ರೋ ವಿಜ್ಞಾನಿಗಳಿಗೆ ಮೂರು ತಿಂಗಳಿನಿಂದ ಸಂಬಳವಾಗಿಲ್ಲ ಎಂದು ಹೇಳಿಕೊಂಡಿದ್ದರು. ಇದು ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.
ಕಳೆದ ಮೂರು ತಿಂಗಳಿಂದ ಇಸ್ರೋ ವಿಜ್ಞಾನಿಗಳಿಗೆ ಸಂಬಳ ನೀಡಲಾಗಿಲ್ಲ. ಅದು ನ್ಯಾಯವೇ? ಮತ್ತು ಇದು ಈ ಸರ್ಕಾರದೊಂದಿಗಿನ ನನ್ನ ಸಮಸ್ಯೆ. ಇಸ್ರೋ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ. ಅದೊಂದು ದೊಡ್ಡ ಸಂಸ್ಥೆ. ಮೂರು ತಿಂಗಳ ಸಂಬಳವನ್ನು ಪಾವತಿಸಲಾಗಿಲ್ಲ ಎಂದು ಹೇಳಿದ್ದರು.
ಈ ಬಗ್ಗೆ ಪಿಐಬಿ ಫ್ಯಾಕ್ಟ್ ಚೆಕ್ ಮಾಡಿದ್ದು, ಇಸ್ರೋ ವಿಜ್ಞಾನಿಗಳು ತಮ್ಮ ಸಂಬಳವನ್ನು ಪ್ರತಿ ತಿಂಗಳ ಕೊನೆಯ ದಿನದಂದು ಸ್ವೀಕರಿಸುತ್ತಾರೆ ಎಂದು ದೃಢಪಡಿಸಲಾಗಿದೆ.
ಇತ್ತೀಚೆಗೆ ಜನಪ್ರಿಯ ಟೆಲಿವಿಷನ್ ರಿಯಾಲಿಟಿ ಶೋ ಬಿಗ್ ಬಾಸ್ 13ರಲ್ಲಿ ವೈಲ್ಡ್‌ಕಾರ್ಡ್ ಎಂಟ್ರಿ ಪಡೆದಿದ್ದ ರಾಜಕೀಯ ವಿಶ್ಲೇಷಕ ಮತ್ತು ಉದ್ಯಮಿ ತೆಹ್ಸೀನ್ ಪೂನವಾಲಾ, ಸದ್ಯ ಚರ್ಚೆಯ ಕೇಂದ್ರ ಬಿಂದುವಾಗಿದ್ದಾರೆ.
ತೆಹ್ಸೀನ್ ಅವರ ಸಹೋದರರಾಗಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ವಕ್ತಾರ ಶೆಹಜಾದ್ ಪೂನಾವಾಲಾ ಅವರು ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಮೂರು ತಿಂಗಳಿಂದ ಸಂಬಳ ಪಡೆಯದ ಇಸ್ರೋದ ಹತ್ತು ವಿಜ್ಞಾನಿಗಳ ಪಟ್ಟಿಯನ್ನು ನೀಡುವಂತೆ ತಹಸೀನ್‌ಗೆ ಸವಾಲು ಹಾಕಿದ್ರು.
ಅಂದಹಾಗೆ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ-3 ಮಿಷನ್ ಅನ್ನು ಯಶಸ್ವಿಯಾಗಿ ಪ್ರಾರಂಭಿಸಿದೆ. ಇದು ಚಂದ್ರನ ದಕ್ಷಿಣ ಧ್ರುವವನ್ನು ಅನ್ವೇಷಿಸುವ ಭಾರತದ ಕಾರ್ಯಾಚರಣೆಯಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ.
https://twitter.com/PIBFactCheck/status/1691790344936153529?ref_src=twsrc%5Etfw%7Ctwcamp%5Etweetembed%7Ctwterm%5E1691790344936153529%7Ctwgr%5E7bd104acf9e7e109984940ca6dcc40075d6ea71e%7Ctwcon%5Es1_&ref_url=https%3A%2F%2Fwww.india.com%2Fnews%2Findia%2Fpib-fact-check-tehseen-poonawalla-claim-salaries-of-chandrayan-3-isro-scientists-not-paid-for-3-months-heres-the-truth-ranveer-show-podcast-beerbiceps-6232732%2F
https://twitter.com/Shehzad_Ind/status/1691729123734061501?ref_src=twsrc%5Etfw%7Ctwcamp%5Etweetembed%7Ctwterm%5E1691729123734061501%7Ctwgr%5E7bd104acf9e7e109984940ca6dcc40075d6ea71e%7Ctwcon%5Es1_&ref_url=https%3A%2F%2Fwww.india.com%2Fnews%2Findia%2Fpib-fact-check-tehseen-poonawalla-claim-salaries-of-chandrayan-3-isro-scientists-not-paid-for-3-months-heres-the-truth-ranveer-show-podcast-beerbiceps-6232732%2F