ಪ್ರೊ ಕಬಡ್ಡಿ ಲೀಗ್ ನಲ್ಲಿ ಯುವ ಪ್ರತಿಭೆಗಳು ಮಿಂಚುತ್ತಿದ್ದು ಅದರಲ್ಲಿ ಪಟ್ನಾ ಪೈರೇಟ್ಸ್ ನ 24 ವರ್ಷದ ಪ್ರಮುಖ ರೈಡರ್ ಸಚಿನ್ ತನ್ವಾರ್ ಕೂಡ ಒಬ್ಬರು, ಸಚಿನ್ ತನ್ವಾರ್ ನಿನ್ನೆಯ ಪದ್ಯದಲ್ಲಿ 900 ರೈಡಿಂಗ್ ಪಾಯಿಂಟ್ ಗಳ ಗಡಿ ಮುಟ್ಟಿದ್ದಾರೆ, ಈ ಮೂಲಕ ಅತಿ ವೇಗವಾಗಿ 900 ರೈಡಿಂಗ್ ಪಾಯಿಂಟ್ ಪಡೆದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಪರ್ದೀಪ್ ನರ್ವಾಲ್, ಮಣಿಂದರ್ ಸಿಂಗ್, ಪವನ್ ಸೆಹ್ರಾವತ್ ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲಿ ಅತಿ ಹೆಚ್ಚು ರೈಡಿಂಗ್ ಪಾಯಿಂಟ್ ಪಡೆದವರರಲ್ಲಿ ಟಾಪ್ ಮೂರರಲ್ಲಿದ್ದಾರೆ. ಹಲವಾರು ವರ್ಷಗಳಿಂದ ಪ್ರೊ ಕಬಡ್ಡಿ ಲೀಗ್ ನಲ್ಲಿ ಮಿಂಚಿರುವ ಈ ರೈಡರ್ ಗಳಿಗೆ ದೇಶದಲ್ಲೆಡೆ ಅಭಿಮಾನಿಗಳ ದಂಡೇ ಇದೆ. ಇವರನ್ನು ಹೊರತುಪಡಿಸಿ ಅರ್ಜುನ್ ದೇಶವಾಲ್, ನವೀನ್ ಎಕ್ಸ್ಪ್ರೆಸ್, ಸಚಿನ್ ತನ್ವಾರ್ ಸೇರಿದಂತೆ ಹೊಸ ಪ್ರತಿಭೆಗಳು ಇತ್ತೀಚಿಗೆ ಸಾಕಷ್ಟು ಸದ್ದು ಮಾಡುತ್ತಿದ್ದಾರೆ.