ಸೋಮವಾರ ರಾತ್ರಿ ರಷ್ಯಾದ ಮಖಚ್ಕಲಾದಲ್ಲಿನ ಫಿಲ್ಲಿಂಗ್ ಸ್ಟೇಷನ್ ನಲ್ಲಿ ಸ್ಫೋಟ ಸಂಭವಿಸಿ 12 ಜನ ಮೃತಪಟ್ಟಿದ್ದು, 66 ಜನರು ಗಾಯಗೊಂಡಿದ್ದಾರೆ.
ಮಖಚ್ಕಲಾದಲ್ಲಿನ ಫಿಲ್ಲಿಂಗ್ ಸ್ಟೇಷನ್ ಎದುರು ಸ್ಫೋಟ ಸಂಭವಿಸಿದೆ. ತುರ್ತು ಸಚಿವಾಲಯವು, ಇತ್ತೀಚಿನ ಅಂಕಿಅಂಶಗಳ ಪ್ರಕಾರ 12 ಜನರು ಸಾವನ್ನಪ್ಪಿದ್ದು, 66 ಮಂದಿ ಗಾಯಗೊಂಡಿದ್ದಾರೆ. ಮಖಚ್ಕಲಾದಲ್ಲಿನ ಫಿಲ್ಲಿಂಗ್ ಸ್ಟೇಷನ್‌ನಲ್ಲಿ ಸ್ಫೋಟದ ನಂತರ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಗಿದೆ. ಈಗ ಹಾಳಾದ ಕಟ್ಟಡ ಕೆಡವಲಾಗುತ್ತಿದೆ ಎಂದು ಹೇಳಿದೆ.
ಗಾಯಗೊಂಡ ಜನರಿಗೆ ಚಿಕಿತ್ಸೆ ನೀಡಲು ಅಗತ್ಯವಿರುವ ಎಲ್ಲವನ್ನೂ ಮಖಚ್ಕಲಾ ಆಸ್ಪತ್ರೆಗಳು ಸಜ್ಜುಗೊಳಿಸಿವೆ ಎಂದು ರಷ್ಯಾದ ಆರೋಗ್ಯ ಸಚಿವಾಲಯ ತಿಳಿಸಿದೆ. ಸೋಮವಾರ, ಮಖಚ್ಕಲಾ ಹೊರವಲಯದಲ್ಲಿರುವ ಫಿಲ್ಲಿಂಗ್ ಸ್ಟೇಷನ್‌ನಲ್ಲಿ ಸ್ಫೋಟ ಸಂಭವಿಸಿದೆ. ಇದರ ನಂತರ, 600 ಚದರ ಮೀಟರ್‌ಗೆ ತಲುಪಿದ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.
ಸುದ್ದಿಗಾರರೊಂದಿಗೆ ಮಾತನಾಡಿದ ಡಾಗೆಸ್ತಾನ್ ಮುಖ್ಯಸ್ಥ ಸೆರ್ಗೆ ಮೆಲಿಕೋವ್, ಫಿಲ್ಲಿಂಗ್ ಸ್ಟೇಷನ್ ಎದುರು ಸ್ಫೋಟ ಸಂಭವಿಸಿದೆ. ಸ್ಫೋಟದ ಕಾರಣದ ಬಗ್ಗೆ ತನಿಖೆ ನಡೆಸಲಾಗಿದೆ. ಹಾನಿ ಬಗ್ಗೆಯೂ ಪರಿಶೀಲನೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಎಂಟು ಇಂಧನ ಟ್ಯಾಂಕ್‌ಗಳಲ್ಲಿ ಎರಡು ಸ್ಫೋಟಗೊಂಡಿದೆ. 70 ಕ್ಕೂ ಹೆಚ್ಚು ಜನರು ಮತ್ತು 20 ಉಪಕರಣಗಳು ಬೆಂಕಿಯನ್ನು ನಿಯಂತ್ರಿಸಿವೆ. ಎರಡನೇ ಸ್ಫೋಟದ ಅಪಾಯವಿರುವುದರಿಂದ ಪೊಲೀಸರು ಮತ್ತು ನಗರ ಅಧಿಕಾರಿಗಳು ಸ್ಥಳದಿಂದ ಜನರನ್ನು ಸ್ಥಳಾಂತರಿಸಿದ್ದಾರೆ.
https://twitter.com/JackStr42679640/status/1691274444906627072
https://twitter.com/InaNobumaru/status/1691266968442298368
https://twitter.com/Conta__Mauricio/status/1691270514914832385