ಬೆಂಗಳೂರು: ಗ್ರಾಮೀಣ ಕೃಪಾಕದಡಿ ನೇಮಕವಾದ ಶಿಕ್ಷಕರಿಗೆ ಅರ್ಹತಾದಾಯಕ ಸೇವೆ ಇಲ್ಲವೆಂದು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.
ಕರ್ನಾಟಕ ನಾಗರೀಕ ಸೇವಾ ನಿಯಮ 247 ಎ ಅನ್ವಯ ಅರ್ಹತಾದಾಯಕ ಸೇವೆ ಮಂಜೂರಿಗೆ ಗ್ರಾಮೀಣ ಕೃಪಾಂಕದಡಿ ನೇಮಕವಾದ ಶಿಕ್ಷಕರಿಗೆ ಅವಕಾಶವಿಲ್ಲವೆಂದು ಅರ್ಹತಾದಾಯಕ ಸೇವೆ ಕುರಿತಾಗಿ ಮಹಾಲೇಖಪಾಲರು ಸ್ಪಷ್ಟನೆ ಕೇಳಿದ್ದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯಿಂದ ತಿಳಿಸಿದೆ.
ಗ್ರಾಮೀಣ ಕೃಪಾಂಕದಲ್ಲಿ ಆಯ್ಕೆಯಾಗಿ ಸೇವೆಯಿಂದ ತೆಗೆದು ಹಾಕಲ್ಪಟ್ಟು ನಂತರ 2003ರ ವಿಶೇಷ ನಿಯಮಾವಳಿಯ ಅನ್ವಯ ಸೇವೆಗೆ ಪುನಃ ವಿಲೀನಗೊಂಡ ಶಿಕ್ಷಕರಿಗೆ ಪಿಂಚಣಿಗಾಗಿ ಮಾನವೀಯತೆಯ ದೃಷ್ಟಿಯಿಂದ ಒಂದು ಬಾರಿಯ ಕ್ರಮವಾಗಿ ಸೇವೆಯಲ್ಲಿ ವಿಲೀನಗೊಳಿಸುವ ಉದ್ದೇಶದಿಂದ 2003ರ ನವೆಂಬರ್ 12ರ ವಿಶೇಷ ನಿಯಮಗಳನ್ನು ಹೊರಡಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಹೇಳಿದೆ.
ಈ ವಿಶೇಷ ನಿಯಮಗಳ ಅನ್ವಯ ವಿಲೀನವಾದ ನೌಕರರಿಗೆ ವಿನಾಯಿತಿ ಹೊಂದುವ ಪೂರ್ವದಲ್ಲಿ ಸಲ್ಲಿಸಿರುವ ಸೇವೆಯನ್ನು ಪಿಂಚಣಿ ಸೌಲಭ್ಯಕ್ಕೆ ಪರಿಗಣಿಸಲು ಈಗಾಗಲೇ ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದನ್ನು ವಿಸ್ತರಿಸಲು ನಿಯಮ 247 ಎ ವ್ಯಾಪ್ತಿಯಲ್ಲಿ ಅವಕಾಶ ಇರುವುದಿಲ್ಲ ಎಂದು ಶಿಕ್ಷಣ ಇಲಾಖೆಯಿಂದ ಸ್ಪಷ್ಟಪಡಿಸಲಾಗಿದೆ.