5 ಕೋಟಿ ವಂಚನೆ ಕೇಸ್ : ಚಕ್ರವರ್ತಿ ಸೂಲಿಬೆಲೆ ಹೇಳಿದ್ದೇನು?

ಬೆಂಗಳೂರು : ಉದ್ಯಮಿ ಗೋವಿಂದ ಪೂಜಾರಿಗೆ 5 ಕೋಟಿ ರೂ. ವಂಚನೆ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿ ಬಂದಿರುವುದಕ್ಕೆ ಚಕ್ರವರ್ತಿ ಸೂಲಿಬೆಲೆ ಪ್ರತಿಕ್ರಿಯೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉದ್ಯಮಿ ಗೋವಿಂದ ಬಾಬು ಪೂಜಾರಿ ಮೂಲಕ ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ಎರಡು ಬಾರಿ ಕರೆ ಮಾಡಿದ್ದರು. ಗೋವಿಂದ ಬಾಬು ಪೂಜಾರಿಯವರ ಜೊತೆ ಯಾಕೆ ಹೀಗೆ ದುಡ್ಡು ಕೊಟ್ಟಿದ್ದೀರಿ ಎಂದು ಜಗಳ ಮಾಡಿದ್ದೆ.  ಹಾಗಂತ ಈ ಪ್ರಕರಣದಲ್ಲಿ ಥಳಕು ಹಾಕೋದು ಬೇಡ ಎಂದು ಹೇಳಿದ್ದಾರೆ.

ವಂಚನೆ ಪ್ರಕರಣದಲ್ಲಿನನ್ನ ಹೆಸರನ್ನು ಥಳಕು ಹಾಕುವ ಪ್ರಯತ್ನ ನಡೆಯುತ್ತಿದೆ. ಆದರೆ ಇದನ್ನು ಗಂಭೀರವಾಗಿ ನಾನು ತೆಗೆದುಕೊಳ್ಳಲ್ಲ. ಗೋವಿಂದ ಬಾಬು ಪೂಜಾರಿ ನನ್ನ ಆತ್ಮೀಯರು ಎಂದಿದ್ದಾರೆ.

ಸ್ವಾಮೀಜಿಗಳು ಸಿಕ್ಕಿಹಾಕಿಕೊಂಡರೆ ದೊಡ್ಡ ದೊಡ್ಡವರ ಹೆಸರು ಬಯಲಾಗುತ್ತದೆ ಎಂದು ಚೈತ್ರಾ ಕುಂದಾಪುರ ಇತ್ತೀಚೆಗೆ ಸ್ಪೋಟಕ ಹೇಳಿಕೆ ನೀಡಿದ್ದರು. ಉದ್ಯಮಿಗೆ 5 ಕೋಟಿ ಹಣ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಸಿಬಿ ಇದೀಗ ಅಭಿನವ ಹಾಲಶ್ರೀ ಬಂಧನಕ್ಕೆ ಬಲೆ ಬೀಸಿದೆ. ಅಭಿನವ ಹಾಲಶ್ರೀ ಹೈದರಾಬಾದ್ ನಲ್ಲಿ ಅಡಗಿರುವ ಶಂಕೆ ವ್ಯಕ್ತವಾಗಿದ್ದು, ಸಿಸಿಬಿ ಪೊಲೀಸರು ಬಂಧಿಸಲು ತೆರಳಿದ್ದಾರೆ ಎಂದು ತಿಳಿದು ಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read