ಬೆಂಗಳೂರು: ಅಂಗವಿಕಲರ ಆರೈಕೆದಾರರಿಗೆ ಮಾಸಿಕ ಒಂದು ಸಾವಿರ ರೂಪಾಯಿ ಪ್ರೋತ್ಸಾಹ ಧನ ನೀಡಲು ಸರ್ಕಾರ ಆದೇಶಿಸಿದೆ.
ರಾಜ್ಯದಲ್ಲಿ ಸೆರೆಬ್ರಲ್ ಪಾಲ್ಸಿ, ಮಸ್ಕಲರ್ ಡಿಸ್ಟ್ರಾಪಿ, ಪಾರ್ಕಿನ್ಸನ್, ಮಲ್ಟಿಪಲ್ ಸ್ಲೆರಾಸಿಸ್ ಕಾಯಿಲೆಗಳಿಂದಾಗಿ ಅಂಗವೈಕಲ್ಯದಿಂದ ಬಳಲುತ್ತಿರುವ ವ್ಯಕ್ತಿಗಳ ಆರೈಕೆದಾರರಿಗೆ ಪ್ರತಿ ತಿಂಗಳು ಒಂದು ಸಾವಿರ ರೂಪಾಯಿ ಪ್ರೋತ್ಸಾಹ ಧನ ನೀಡಲು ತಕ್ಷಣ ಫಲಾನುಭವಿಗಳನ್ನು ಆಯ್ಕೆ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024 -25 ನೇ ಸಾಲಿನ ಬಜೆಟ್ ನಲ್ಲಿ ಘೋಷಿಸಿದಂತೆ ಯೋಜನೆ ಜಾರಿಯಾಗಿ ಫಲಾನುಭವಿಗಳ ಆಯ್ಕೆಗೆ ಸೂಚಿಸಲಾಗಿದೆ. ಬಾಲ್ಯದಲ್ಲಿ ಕಂಡುಬರುವ ಚಲನೆಯ ಅಸ್ವಸ್ಥತೆ, ಅನುವಂಶಿಕ ಸ್ನಾಯು ದೌರ್ಬಲ್ಯ, ಮಲ್ಟಿಪಲ್ ಸ್ಲೆರಾಸಿಸ್, ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿರುವವರ ಆರೈಕೆದಾರರಿಗೆ ಪ್ರತಿ ತಿಂಗಳು 1000 ಪ್ರೋತ್ಸಾಹ ಧನ ನೀಡಲಾಗುವುದು.