
ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ಸತತ ಆರನೇ ಬಾರಿಗೆ ದ್ವೈ ಮಾಸಿಕ ಆರ್ಥಿಕ ಪರಾಮರ್ಶೆ ಸಭೆಯಲ್ಲಿ ರೆಪೊ ದರವನ್ನು ಯಥಾಸ್ಥಿತಿಯಲ್ಲಿ ಇರಿಸುವ ತೀರ್ಮಾನ ಕೈಗೊಂಡಿದೆ. ಇದರಿಂದ ಈ ವರ್ಷದ ದ್ವಿತೀಯಾರ್ಧದಲ್ಲಿ ಸಾಲಗಳ ಮೇಲಿನ ಬಡ್ಡಿದರ ಇಳಿಕೆಯಾಗುವುದರೊಂದಿಗೆ ಸಾಲಗಾರರಿಗೆ ಸ್ವಲ್ಪ ನಿರಾಳತೆ ಸಿಗುವ ಸಾಧ್ಯತೆ ಇದೆ.
ಆರ್.ಬಿ.ಐ. ರೆಪೊ ದರವನ್ನು ಯಥಾಸ್ಥಿತಿಯಲ್ಲಿ ಇರಿಸುವ ತೀರ್ಮಾನ ಕೈಗೊಂಡಿದೆ. 2024ರ ಏಪ್ರಿಲ್ 1ರಿಂದ ಆರಂಭವಾಗುವ ಹಣಕಾಸು ವರ್ಷದಲ್ಲಿ ಬಡ್ಡಿದರ ಇಳಿಕೆ ಪ್ರಕಟಿಸುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ನಿರೀಕ್ಷೆಯಲ್ಲಿದ್ದಾರೆ. ಇದರಿಂದಾಗಿ ಗೃಹ, ವಾಹನ ಸೇರಿ ವಿವಿಧ ಸಾಲಗಳ ಮೇಲಿನ ಬಡ್ಡಿ ದರ ಕೊಂಚ ಇಳಿಕೆಯಾಗಿ ಸಾಲಗಾರರಿಗೆ ನಿರಾಳತೆ ಸಿಗುವ ಸಂಭವ ಇದೆ.