ಜೇಡಗಳ ಕಾಟದಿಂದ ಮುಕ್ತಿ ಪಡೆಯುವುದು ಹೇಗೆ…..?

ಮನೆಯಲ್ಲಿ ಜೇಡಗಳ ಕಾಟ ವಿಪರೀತ ಹೆಚ್ಚಿದೆಯೇ? ಮನೆಯ ಛಾವಣಿಯಲ್ಲಿ ಬಲೆ ಕಟ್ಟಿ ಮನೆಯ ಸೌಂದರ್ಯವನ್ನೇ ಹಾಳು ಮಾಡುತ್ತಿವೆಯೇ? ಅದನ್ನು ಓಡಿಸಲು ನೀವು ರಾಸಾಯನಿಕ ಭರಿತ ಸ್ಪ್ರೇ ಗಳನ್ನು ಬಳಸಬೇಕಿಲ್ಲ. ಅದರ ಬದಲು ಈ ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಿ.

ಪುದೀನಾ ಎಣ್ಣೆಗೆ ಸ್ವಲ್ಪ ನೀರು ಬೆರೆಸಿ ಸ್ಪ್ರೇ ಬಾಟಲ್ ಗೆ ಹಾಕಿ ಮತ್ತು ಇದನ್ನು ಬಲೆಗಳಿಗೆ ಸಿಂಪಡಿಸಿ. ಆಗ ಜೇಡಗಳು ದೂರವಾಗುತ್ತವೆ. ಟೀಟ್ರೀ ಎಣ್ಣೆ, ಲ್ಯಾವೆಂಡರ್ ಎಣ್ಣೆಯಿಂದಲೂ ಇದೇ ಲಾಭವನ್ನು ಪಡೆಯಬಹುದು.

ಸಿಟ್ರಸ್ ಹಣ್ಣುಗಳ ವಾಸನೆಯನ್ನು ಜೇಡಗಳು ತಡೆದುಕೊಳ್ಳುವುದಿಲ್ಲ. ಜೇಡ ಸಾಮಾನ್ಯವಾಗಿ ಇರುವ ಜಾಗದಲ್ಲಿ ನಿಂಬೆ ಅಥವಾ ಕಿತ್ತಳೆ ಸಿಪ್ಪೆಯಿಂದ ಉಜ್ಜುವ ಮೂಲಕ, ಇದರ ರಸದ ಸ್ಪ್ರೇ ತಯಾರಿಸಿ ಹಾಕುವ ಮೂಲಕ ಕೂಡಾ ಜೇಡವನ್ನು ಓಡಿಸಬಹುದು.

ನಿಮಗೆ ಅಚ್ಚರಿಯಾಗಬಹುದು, ಆದರೂ ಇಲ್ಲಿ ಕೇಳಿ. ಗೋಡಂಬಿ, ಬಾದಾಮಿ ಮೊದಲಾದ ಬೀಜಗಳೂ ಜೇಡವನ್ನು ದೂರ ಮಾಡುತ್ತವೆ. ಇದು ಹೇಗೆ ಎಂಬುದಕ್ಕೆ ವೈಜ್ಞಾನಿಕ ಕಾರಣವಿನ್ನೂ ತಿಳಿದು ಬಂದಿಲ್ಲ. ಬೆಳ್ಳುಳ್ಳಿ ಘಾಟಿಗೂ ಜೇಡ ಸಮೀಪ ಬರುವುದಿಲ್ಲ. ಪುದೀನಾ, ತುಳಸಿ ಹಾಗೂ ಲ್ಯಾವೆಂಡರ್ ಗಿಡಗಳನ್ನು ಮನೆಯ ಸುತ್ತ ನೆಡುವುದರಿಂದ ಜೇಡಗಳು ಹೆಚ್ಚಾಗಿ ವಾಸಿಸಲು ಮನೆಗೆ ಬರುವುದಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read