ಹವಾಮಾನ ಬದಲಾವಣೆ, ಮಣ್ಣು, ಧೂಳು ಹೀಗೆ ಅನೇಕ ಕಾರಣಗಳಿಂದ ಕೈ ಒರಟಾಗುತ್ತದೆ. ಇದನ್ನು ನಿರ್ಲಕ್ಷ್ಯಿಸಿದ್ರೆ ಚರ್ಮದ ಬಿಗಿತ ಹೆಚ್ಚಾಗುತ್ತದೆ.
ಕೆಲವರಿಗೆ ಕೈಗಳಿಂದ ರಕ್ತ ಬರಲು ಶುರುವಾಗುತ್ತದೆ. ಒರಟು ಕೈಗಳಿಗೆ ಮನೆಯಲ್ಲಿರುವ ವಸ್ತುಗಳನ್ನು ಬಳಸಿಯೇ ಗುಡ್ ಬೈ ಹೇಳಬಹುದು. ಸುಲಭವಾಗಿ ಕೋಮಲ ಕೈಗಳನ್ನು ನಿಮ್ಮದಾಗಿಸಿಕೊಳ್ಳಬಹುದು.
ಆಲಿವ್ ಆಯಿಲ್ ಒರಟು ಕೈಗಳಿಗೆ ತುಂಬಾ ಪ್ರಯೋಜನಕಾರಿ. ಇದು ಚರ್ಮವನ್ನು ಮೃದುಗೊಳಿಸುತ್ತದೆ. ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಕೈಗಳಿಗೆ ಹಚ್ಚಿ 10 ನಿಮಿಷ ಮಸಾಜ್ ಮಾಡಿ. ಕೆಲವೇ ದಿನಗಳಲ್ಲಿ ಕೈ ಕೋಮಲವಾಗಲಿದೆ.
ಅಲೋವೆರಾ ಮಾಯಿಶ್ಚರೈಸರ್ ರೀತಿಯಲ್ಲಿ ಕೆಲಸ ಮಾಡುತ್ತದೆ. ಇದ್ರ ರಸವನ್ನು ಕೈಗೆ ಹಚ್ಚಿ 10 ನಿಮಿಷ ಮಸಾಜ್ ಮಾಡಿ. ನಂತ್ರ ಬೆಚ್ಚಗಿನ ನೀರಿನಲ್ಲಿ ಕೈ ತೊಳೆಯುರಿ. ಒಂದು ವಾರ ಹೀಗೆ ಮಾಡುತ್ತ ಬಂದಲ್ಲಿ ಪರಿಣಾಮ ನೋಡಬಹುದು.
ಹಾಲಿನ ಕೆನೆ ಕೂಡ ಕೈ ಮೃದುಗೊಳಿಸುತ್ತದೆ. ಹಾಲಿನ ಕೆನೆಯನ್ನು ಕೈಗಳಿಗೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಬೇಕು.
ಜೇನುತುಪ್ಪದಲ್ಲಿ ಆಂಟಿಆಕ್ಸಿಡೆಂಟ್ ಮತ್ತು ಆಂಟಿಬಯೋಟಿಕ್ ಅಂಶವಿದೆ. ಇದು ಹೆಚ್ಚಾಗುತ್ತಿರುವ ವಯಸ್ಸನ್ನು ಮುಚ್ಚಿಡುತ್ತದೆ. ಜೇನು ತುಪ್ಪವನ್ನು ಕೈಗಳಿಗೆ ಹಚ್ಚಿ ಕೆಲ ನಿಮಿಷದ ನಂತ್ರ ಕೈ ತೊಳೆದುಕೊಳ್ಳಿ.
ಬಾಳೆಹಣ್ಣು ಚರ್ಮವನ್ನು ಮೃದುಗೊಳಿಸಲು ಸಹಾಯ ಮಾಡುತ್ತದೆ. ಬೇಯಿಸಿದ ಬಾಳೆ ಹಣ್ಣಿನ ಜೊತೆ ಜೇನುತುಪ್ಪ ಹಾಗೂ ಆಲಿವ್ ಆಯಿಲ್ ಮಿಕ್ಸ್ ಮಾಡಿ ಕೈಗಳಿಗೆ ಹಚ್ಚಿ. 20 ನಿಮಿಷ ಬಿಟ್ಟು ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಿ.