alex Certify ಈ ಎಸೆನ್ಷಿಯಲ್ ಆಯಿಲ್ ಬಳಸಿ ʼತಲೆನೋವುʼ ನಿವಾರಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಎಸೆನ್ಷಿಯಲ್ ಆಯಿಲ್ ಬಳಸಿ ʼತಲೆನೋವುʼ ನಿವಾರಿಸಿ

ಅತಿಯಾದ ಕೆಲಸ, ಒತ್ತಡ, ಚಿಂತೆಗಳಿಂದ ಕೆಲವೊಮ್ಮೆ ತಲೆ ನೋವು ಶುರುವಾಗುತ್ತದೆ. ಹಾಗೇ ಆಲ್ಕೋಹಾಲ್ ಸೇವನೆ, ನೀರಿನ ಕಡಿಮೆ ಸೇವನೆ, ನಿದ್ರೆಯ ಕೊರತೆ ಮುಂತಾದವು ಕೂಡ ತಲೆನೋವಿಗೆ ಕಾರಣವಾಗಿವೆ. ಆದರೆ ಇದಕ್ಕಾಗಿ ಔಷಧಿಗಳನ್ನು ಸೇವಿಸುವ ಬದಲು ಈ ಎಸೆನ್ಷಿಯಲ್ ಬಳಸಿ ತಲೆನೋವನ್ನು ನಿವಾರಿಸಿಕೊಳ್ಳಿ.

*ರೋಸ್ಮರಿ ಆಯಿಲ್ ಮಸಾಜ್ : ಈ ಎಣ್ಣೆಯಲ್ಲಿ ಉರಿಯೂತ ನಿವಾರಣೆ ಮತ್ತು ನೋವು ನಿವಾರಕ ಗುಣಗಳಿವೆ. ಇದು ತಲೆನೋವನ್ನು ಗುಣಪಡಿಸಲು ಸಹಕಾರಿಯಾಗಿದೆ. ರೋಸ್ಮರಿ ಆಯಿಲ್ ನ ಕೆಲವು ಹನಿಗಳನ್ನು 1 ಚಮಚ ತೆಂಗಿನೆಣ್ಣೆ ಅಥವಾ ಆಲಿವ್ ಆಯಿಲ್ ನಲ್ಲಿ ಬೆರೆಸಿ ಹಣೆಯ ಮೇಲೆ ಮಸಾಜ್ ಮಾಡಿ. ಇದರಿಂದ ತಲೆನೋವು ಬೇಗ ವಾಸಿಯಾಗುತ್ತದೆ.

*ಲ್ಯಾವೆಂಡರ್ ಆಯಿಲ್ : ಇದರ ಪರಿಮಳದಲ್ಲಿಯೇ ನೋವನ್ನು ನಿವಾರಿಸುವಂತಹ ಗುಣಗಳಿರುತ್ತದೆ. ಇದು ಉದ್ವೇಗದ ತಲೆನೋವನ್ನು ನಿವಾರಿಸುತ್ತದೆ. 2 ಕಪ್ ಕುದಿಯುವ ನೀರಿಗೆ 2 ಹನಿ ಲ್ಯಾವೆಂಡರ್ ಎಣ್ಣೆಯನ್ನು ಬೆರೆಸಿ ಸ್ಟೀಮ್ ತೆಗೆದುಕೊಳ್ಳಿ. ಅಥವಾ 1ಚಮಚ ಬಾದಾಮಿ ಎಣ್ಣೆಯೊಂದಿಗೆ 3 ಹನಿ ಲ್ಯಾವೆಂಡರ್ ಆಯಿಲ್ ನ್ನು ಮಿಕ್ಸ್ ಮಾಡಿ ಹಣೆಗೆ ಹಚ್ಚಿ ಮಸಾಜ್ ಮಾಡಿದರೆ ತಲೆನೋವು ನಿವಾರಣೆಯಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...