ತರಕಾರಿಗಳಲ್ಲಿ ಸಾಕಷ್ಟು ವೆರೈಟಿ ಇದೆ. ಮನುಷ್ಯನ ದೇಹವನ್ನು ಸದೃಢವಾಗಿಡಲು ತರಕಾರಿಗಳು ಬಹಳಷ್ಟು ಸಹಾಯ ಮಾಡುತ್ತವೆ. ಎಲ್ಲರೂ ಇಷ್ಟಪಡುವಂತಹ ತರಕಾರಿಗಳಲ್ಲೊಂದು ಆಲೂಗಡ್ಡೆ. ಆಲೂಗಡ್ಡೆಯಲ್ಲಿ ಮಾಡಿದ ತರಹೇವಾರಿ ರೆಸಿಪಿಗಳು ಬಾಯಲ್ಲಿ ನೀರೂರಿಸುತ್ತವೆ. ಕೆಂಪು ಆಲೂಗಡ್ಡೆಯ ಪ್ರಯೋಜನಗಳ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಪೊಟ್ಯಾಸಿಯಮ್, ಕಾರ್ಬೋಹೈಡ್ರೇಟ್ಗಳು, ಪ್ರೋಟೀನ್, ಫೈಬರ್, ಕಬ್ಬಿಣ, ವಿಟಮಿನ್ ಸಿ ಮತ್ತು ಮೆಗ್ನೀಸಿಯಮ್‌ಗಳು ಕೆಂಪು ಆಲೂಗಡ್ಡೆಯಲ್ಲಿ ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತವೆ.
ಕೆಂಪು ಆಲೂಗಡ್ಡೆಯಲ್ಲಿ ಹೇರಳವಾದ ಫೈಬರ್ ಅಂಶವಿದೆ. ನಾರಿನಂಶ ಹೆಚ್ಚಿರುವ ಆಹಾರವನ್ನು ಸೇವಿಸುವುದರಿಂದ ಹೊಟ್ಟೆಯು ದೀರ್ಘಕಾಲದವರೆಗೆ ತುಂಬಿರುತ್ತದೆ ಮತ್ತು ಹಸಿವು ಕಡಿಮೆಯಾಗುತ್ತದೆ. ಈ ಮೂಲಕ ಹೆಚ್ಚು ಆಹಾರ ಸೇವಿಸದೆ ತೂಕ ಕಡಿಮೆ ಮಾಡಿಕೊಳ್ಳಬಹುದು.
ಕೆಂಪು ಆಲೂಗಡ್ಡೆ ಪೊಟ್ಯಾಸಿಯಮ್‌ನ ಉತ್ತಮ ಮೂಲವಾಗಿದೆ. ಹಾಗಾಗಿ ಇದನ್ನು ಸೇವಿಸುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸಬಹುದು. ಬಿಪಿ ಸಮಸ್ಯೆ ಇರುವವರು ಕೆಂಪು ಆಲೂಗಡ್ಡೆ ತಿನ್ನಬೇಕು.
ವಿಟಮಿನ್ ಬಿ6 ಕೆಂಪು ಆಲೂಗಡ್ಡೆಯಲ್ಲಿ ಹೇರಳವಾಗಿ ಕಂಡುಬರುತ್ತದೆ. ಈ ವಿಟಮಿನ್ ಉತ್ತಮ ಮಾನಸಿಕ ಸ್ಥಿತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಒತ್ತಡದಲ್ಲಿರುವವರು ಇದನ್ನು ಸೇವಿಸಬೇಕು.
ಕೆಂಪು ಆಲೂಗಡ್ಡೆಯಲ್ಲಿರುವ ವಿಟಮಿನ್ ಸಿ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಶೀತ, ಕೆಮ್ಮು ಮತ್ತು ಜ್ವರದಂತಹ ಕಾಯಿಲೆಗಳಿಂದ ನಮ್ಮನ್ನು ದೂರವಿರಿಸುತ್ತದೆ.
ಕೆಂಪು ಆಲೂಗಡ್ಡೆಯಲ್ಲಿ ಕಾರ್ಬೋಹೈಡ್ರೇಟ್ ಕೂಡ ಹೇರಳವಾಗಿದೆ. ಕಾರ್ಬೋಹೈಡ್ರೇಟ್‌ಗಳಿಂದ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದರಿಂದ ದೇಹಕ್ಕೆ ಶಕ್ತಿ ದೊರೆಯುತ್ತದೆ. ಬೆಳಗಿನ ಉಪಹಾರಕ್ಕೆ ಕೆಂಪು ಆಲೂಗಡ್ಡೆಯನ್ನು ಸೇವಿಸಿದರೆ ದೇಹವು ದಿನವಿಡೀ ಶಕ್ತಿಯುತವಾಗಿರುತ್ತದೆ.