
ಕಲರ್ಸ್ ಕನ್ನಡ ಅನುಬಂಧ ಅವಾರ್ಡ್ ನಲ್ಲಿ ಇತ್ತೀಚಿಗಷ್ಟೇ ಕಾಣಿಸಿಕೊಂಡಿದ್ದ ರಿಯಲ್ ಸ್ಟಾರ್ ಉಪೇಂದ್ರ ಇದೀಗ ಜೀ ಕನ್ನಡ ವಾಹಿನಿಯ ಡಾನ್ಸ್ ಕರ್ನಾಟಕ ಡ್ಯಾನ್ಸ್ ಮಹಾ ಸಂಚಿಕೆಗೆ ಆಗಮಿಸಲಿದ್ದಾರೆ. ಈ ಕುರಿತು ಜಿ ಕನ್ನಡ ವಾಹಿನಿ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಿಳಿಸಿದೆ. ‘UI’ ಚಿತ್ರದ ಟೀಸರ್ ಅನ್ನು ಜೀ ಕನ್ನಡ ವೇದಿಕೆಯಲ್ಲಿ ತೋರಿಸಲಿದ್ದು, ಸ್ಪರ್ಧಿಗಳು ರಿಯಲ್ ಸ್ಟಾರ್ ಉಪೇಂದ್ರ ಅವರ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ. ಭಾನುವಾರ ಸಂಜೆ ಏಳರಿಂದ 11-00 ರವರೆಗೆ ಈ ಕಾರ್ಯಕ್ರಮ ನಡೆಯಲಿದ್ದು, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಅವರನ್ನು ಒಂದೇ ವೇದಿಕೆಯಲ್ಲಿ ನೋಡಬಹುದಾಗಿದೆ.