ಮುಂಬೈ: ಹಳೆ ಪಿಂಚಣಿ ಮರು ಜಾರಿ ವಿರುದ್ಧ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಚ್ಚರಿಕೆ ನೀಡಿದೆ. ಚುನಾವಣೆ ಪ್ರಣಾಳಿಕೆಯ ಭಾಗವಾಗಿ ಅನೇಕ ರಾಜ್ಯಗಳಲ್ಲಿ ಸರ್ಕಾರಿ ಉದ್ಯೋಗಿಗಳಿಗೆ ಎನ್.ಪಿ.ಎಸ್. ಬದಲಾಗಿ ಒಪಿಎಸ್ ಯೋಜನೆ ಮರು ಜಾರಿ ಮಾಡಲಾಗುತ್ತಿದೆ. ಇದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಆರ್‌ಬಿಐ ಎಚ್ಚರಿಕೆ ನೀಡಿದೆ.
ಒಪಿಎಸ್ ಮರು ಜಾರಿ ಮಾಡುವುದರಿಂದ ರಾಜ್ಯಗಳ ಅರ್ಥ ವ್ಯವಸ್ಥೆಗೆ ದೊಡ್ಡ ಪೆಟ್ಟು ಬೀಳುತ್ತದೆ. ಸಾಲದ ಪ್ರಮಾಣ ಹೆಚ್ಚಾಗುತ್ತದೆ ಎಂದು ಆರ್‌ಬಿಐ ಕಳವಳ ವ್ಯಕ್ತಪಡಿಸಿದೆ. ಆರ್‌ಬಿಐ ಸಿದ್ದಪಡಿಸಿದ ವರದಿಯಲ್ಲಿ ಆರ್ಥಿಕ ಸಂಪನ್ಮೂಲದಲ್ಲಿ ವಾರ್ಷಿಕವಾಗಿ ಸಾಧಿಸಿದ ಉಳಿತಾಯದ ಬಹುಭಾಗ ಈ ಯೋಜನೆಗೇ ಬೇಕಾಗುತ್ತದೆ ಎಂದು ಹೇಳಲಾಗಿದೆ.