ಯುಪಿಐ ಪಾವತಿಗಳು ಭಾರತದಲ್ಲಿ ಜನರು ಆನ್ ಲೈನ್ ನಲ್ಲಿ ಪಾವತಿಸುವ ವಿಧಾನದಲ್ಲಿ ಕ್ರಾಂತಿಯನ್ನುಂಟು ಮಾಡಿವೆ. ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಕೆಲವೇ ನಿಮಿಷಗಳೊಂದಿಗೆ ನೀವು ತಕ್ಷಣ, ಸುರಕ್ಷಿತವಾಗಿ ಮತ್ತು ತೊಂದರೆಯಿಲ್ಲದೆ ಹಣವನ್ನು ಕಳುಹಿಸಬಹುದು ಅಥವಾ ಸ್ವೀಕರಿಸಬಹುದು.
ಯುಪಿಐ ಪಾವತಿಗಳು ಇತರ ಯಾವುದೇ ಆನ್ಲೈನ್ ಪಾವತಿ ವಿಧಾನಕ್ಕಿಂತ ವೇಗವಾಗಿವೆ ಮತ್ತು ಅವು ಅನೇಕ ಬ್ಯಾಂಕುಗಳು ಮತ್ತು ಪ್ಲಾಟ್ಫಾರ್ಮ್ ಗಳಲ್ಲಿ ಕಾರ್ಯನಿರ್ವಹಿಸುತ್ತವೆ. ಆದರೆ ಆನ್ ಲೈನ್ ವಹಿವಾಟುಗಳು ಹೆಚ್ಚು ಸಾಮಾನ್ಯವಾದಂತೆ, ಆನ್ ಲೈನ್ ವಂಚನೆಗಳು ಸಹ ಹೆಚ್ಚಾಗುತ್ತವೆ. ಅದೇ ರೀತಿ ನೀವು ಆನ್ ಲೈನ್ ವ್ಯವಹಾರ ಮಾಡುವಾಗ ಈ ಅಂಶಗಳನ್ನು ಗಮನವಿಟ್ಟ ಓದಿ ತಿಳಿದುಕೊಳ್ಳಿ. ಆರ್ ಬಿ ಐ ಪ್ರಕಾರ ಆನ್ ಲೈನ್ ನಲ್ಲಿ ಹಣ ಕಳುಹಿಸುವಾಗ ತಪ್ಪುಗಳಾದರೆ ಅದಕ್ಕೆ ನೀವೇ ಜವಾಬ್ದಾರರು.
ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ಮೂಲಕ ವ್ಯವಹಾರ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಕೆಲವೊಮ್ಮೆ ಗೊತ್ತಿಲ್ಲದೇ ನಾವು ಮಾಡಿದ ತಪ್ಪಿನಿಂದಾಗಿ ಬೇರೆಯವರ ಖಾತೆಗೆ ಹಣ ಹೋಗುತ್ತದೆ. ಕಡಿಮೆ ಹಣ ಹೋದರೆ ಬಿಡಿ…ಆದರೆ ಸಾವಿರಾರು..ಲಕ್ಷಾಂತರ ಹಣ ಹೋದರೆ ಹೇಗೆ..? ಒಂದು ವೇಳೆ ಈ ತರ ಪರಿಸ್ಥಿತಿ ಎದುರಾದರೆ ಏನು ಮಾಡಬೇಕು? ತಿಳಿಯೋಣ ಬನ್ನಿ.
ಮೊದಲು ನಿಮ್ಮ ಬ್ಯಾಂಕ್ ನ ಬ್ಯಾಂಚ್ ಗೆ ಕರೆ ಮಾಡಿ ಸಂಪೂರ್ಣ ವಿಷಯ ತಿಳಿಸಬೇಕು. ಈ ವೇಳೆ ಅವರು ಕಂಪ್ಲೇಟ್ ರೈಸ್ ಮಾಡಿ ನಿಮಗೆ ನೀಡುತ್ತಾರೆ. ಅಥವಾ ಕಸ್ಟಮರ್ ಕೇರ್ ಗೆ ಕರೆ ಮಾಡಿ ನಡೆದಿರುವ ಘಟನೆ ವಿವರಿಸಬಹುದು. ಆಕ್ಟಿವ್ ಇಲ್ಲದೇ ಇರುವ ಖಾತೆಗೆ ಹಣ ಹೋದರೆ ವಾಪಸ್ ಬರುತ್ತದೆ. ಆದರೆ ಆಕ್ಟಿವ್ ಇರುವ ಖಾತೆಗೆ ಹಣ ಹೋದರೆ ತಪ್ಪು..ಜವಾಬ್ದಾರಿ ನಿಮ್ಮದೇ ಆಗಿರುತ್ತದೆ ಎಂದು ಆರ್ ಬಿ ಐ ಹೇಳುತ್ತದೆ. ಯಾವುದೇ ಖಾತೆಗೆ ಹಣ ಹಾಕುವ ಮುನ್ನ ಅಕೌಂಟ್ ನಂಬರ್, ಐಎಫ್ ಸಿ ಸಂಖ್ಯೆ ವೆರಿಫೈ ಮಾಡಿಕೊಂಡು ಹಣ ಹಾಕಬೇಕು. ಈ ಜವಾಬ್ದಾರಿ ನಿಮ್ಮದೇ ಆಗಿರುತ್ತದೆ. ಅಪ್ಪಿ ತಪ್ಪಿ ಸಂಖ್ಯೆಗಳನ್ನು ತಪ್ಪು ಹಾಕಿ ಯಾರದ್ದೋ ಖಾತೆಗೆ ಹಣ ಹೋದರೆ ಇದರ ಸಂಪೂರ್ಣ ಜವಾಬ್ದಾರಿ ನಿಮ್ಮದೇ ಆಗಿರುತ್ತದೆ. ಈ ಸಂದರ್ಭದಲ್ಲಿ ಬ್ಯಾಂಕ್ ನಿಮ್ಮ ಹಣವನ್ನು ತರುವ ಪ್ರಯತ್ನ ಮಾಡುತ್ತದೆ, ಆದರೆ ಇದರ ಸಂಪೂರ್ಣ ಜವಾಬ್ದಾರಿ ಬ್ಯಾಂಕ್ ಹೊರುವುದಿಲ್ಲ ಎಂದು ಆರ್ ಬಿ ಐ ನಿಯಮ ಹೇಳುತ್ತದೆ.