ಬೆಂಗಳೂರು: ಅನ್ನ ಭಾಗ್ಯ ಯೋಜನೆಯಡಿ ಬಿಪಿಎಲ್ ಕುಟುಂಬದ ಸದಸ್ಯರಿಗೆ ತಲಾ 10 ಕೆಜಿ ಅಕ್ಕಿ ಕೊಡುವುದಾಗಿ ಹೇಳಿರುವ ಸರ್ಕಾರ ಅಕ್ಕಿ ಖರೀದಿಗೆ ಕ್ರಮ ಕೈಗೊಂಡಿದೆ.
ಹೆಚ್ಚುವರಿ ಅಕ್ಕಿ ಕೇಂದ್ರದಿಂದ ದೊರೆಯದ ಕಾರಣ ಪರ್ಯಾಯವಾಗಿ ಕೆಲವು ತಿಂಗಳ ಮಟ್ಟಿಗೆ ಗೋಧಿ, ರಾಗಿ, ಜೋಳ ನೀಡಬೇಕೆಂಬ ಸಲಹೆ ಕೇಳಿ ಬಂದಿದೆ. ಕೇಂದ್ರ ಸರ್ಕಾರ 5 ಕೆ.ಜಿ ಅಕ್ಕಿ ನೀಡುತ್ತಿದ್ದು, ಇದರೊಂದಿಗೆ ರಾಜ್ಯ ಸರ್ಕಾರ 5 ಕೆಜಿ ಗೋಧಿ, ರಾಗಿ, ಸಕ್ಕರೆ, ಜೋಳ ಸೇರಿಸಿ 10 ಕೆಜಿ ಪಡಿತರ ನೀಡಿದಲ್ಲಿ ಜನತೆಗೆ ಅನುಕೂಲವಾಗುತ್ತದೆ ಎಂದು ಹೇಳಲಾಗಿದೆ.
ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಮತ್ತು ಕೃಷಿ ಆರ್ಥಿಕ ತಜ್ಞ ಡಾ. ಪ್ರಕಾಶ್ ಕಮ್ಮರಡಿ ಅವರು ಕೂಡ ಸಿಎಂಗೆ ಪತ್ರ ಬರೆದಿದ್ದು, ಅನ್ನಭಾಗ್ಯ ಯೋಝನೆಗೆ ಅಗತ್ಯವಿರುವ ಹೆಚ್ಚುವರಿ ಧಾನ್ಯಕ್ಕೆ ಹುಡುಕಾಟ ನಡೆಸುವ ಬದಲು ರಾಗಿ ಇಲ್ಲವೇ ಜೋಳ ನೀಡಬಹುದು. ಸ್ವಾಮಿನಾಥನ್ ವರದಿ ಶಿಫಾರಸಿನ ಬೆಂಬಲ ಬೆಲೆ ನೀಡಿ ನಮ್ಮ ರೈತರಿಂದಲೇ ನೇರವಾಗಿ ಖರೀದಿಸಬಹುದು ಎಂದು ಸಲಹೆ ನೀಡಿದ್ದಾರೆ.