BIG NEWS: ಶಮನವಾಯ್ತು ರಮೇಶ್ ಜಾರಕಿಹೊಳಿ –ಲಕ್ಷ್ಮಣ ಸವದಿ ಮುನಿಸು

ಹುಬ್ಬಳ್ಳಿ: ಮಾಜಿ ಸಚಿವ ರಮೇಶ ಜಾರಕಿಹೊಳಿ ಮತ್ತು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮುನಿಸು ಶಮನವಾಗಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಇಬ್ಬರ ನಡುವಿನ ಮುನಿಸು ಶಮನಗೊಳಿಸಿದ್ದಾರೆ.

ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ ಮೂವರು ನಾಯಕರು ಸಭೆ ನಡೆಸಿದ್ದಾರೆ. ರಮೇಶ ಜಾರಕಿಹೊಳಿ ಮತ್ತು ಲಕ್ಷ್ಮಣ ಸವದಿ ಅವರೊಂದಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಭೆ ನಡೆಸಿ ಮುನಿಸು ಶಮನ ಮಾಡಿದ್ದಾರೆ. ಸಭೆ ಮುಗಿದ ನಂತರ ಒಂದೇ ವಾಹನದಲ್ಲಿ ಮೂವರೂ ತೆರಳಿದ್ದಾರೆ.

ಪ್ರಹ್ಲಾದ್ ಜೋಶಿ ವಾಹನದಲ್ಲೇ ರಮೇಶ್ ಮತ್ತು ಲಕ್ಷ್ಮಣ ಸವದಿ ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆ. ಹುಬ್ಬಳ್ಳಿ ಏರ್ಪೋರ್ಟ್ ನಿಂದ ಮೂವರು ನಾಯಕರು ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.

ಅಥಣಿ ಕ್ಷೇತ್ರದಲ್ಲಿ ಶಾಸಕ ಮಹೇಶ್ ಕುಮ್ಮಟಳ್ಳಿ ಅವರಿಗೆ ಟಿಕೆಟ್ ನೀಡಬೇಕೆಂದು ರಮೇಶ್ ಜಾರಕಿಹೊಳಿ ಪಟ್ಟು ಹಿಡಿದಿದ್ದು, ಅವರಿಗೆ ಟಿಕೆಟ್ ಕೊಡದಿದ್ದರೆ ತಾವು ಕೂಡ ಸ್ಪರ್ಧಿಸುವುದಿಲ್ಲವೆಂದು ಹೇಳಿದ್ದಾರೆ. ಆದರೆ, ಅಥಣಿ ಕ್ಷೇತ್ರದಿಂದ ತಮಗೆ ಟಿಕೆಟ್ ನೀಡಬೇಕೆಂದು ಲಕ್ಷ್ಮಣ ಸವದಿ ಪಟ್ಟು ಹಿಡಿದಿದ್ದು, ಈ ವಿಚಾರ ಇಬ್ಬರ ನಡುವೆ ಮುನಿಸಿಗೆ ಕಾರಣವಾಗಿದೆ. ಪ್ರಹ್ಲಾದ್ ಜೋಶಿ ಮಧ್ಯ ಪ್ರವೇಶಿ ಇಬ್ಬರ ಮನವೊಲಿಸಿದ್ದರಿಂದ ಮುನಿಸು ಶಮನವಾಗಿದೆ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read