ಬೆಂಗಳೂರು: ಸಾರಿಗೆ ಇಲಾಖೆ ನೀಡಿರುವುದಕ್ಕೆ ತೀವ್ರ ಅಸಮಾಧಾನಗೊಂಡಿರುವ ನೂತನ ಸಚಿವ ರಾಮಲಿಂಗಾರೆಡ್ಡಿ ಅವರು ಸಾರಿಗೆ ಇಲಾಖೆ ನೀಡುವುದಾದರೆ ಸಚಿವ ಸ್ಥಾನವೇ ಬೇಡ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಬೆಳಗ್ಗೆ 11 ಗಂಟೆಯಿಂದಲೂ ಸಂಸದ ಡಿ.ಕೆ. ಸುರೇಶ್ ಹಾಗೂ ನಂತರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಮಲಿಂಗಾರೆಡ್ಡಿ ಅವರ ಮನವೊಲಿಸಲು ಪ್ರಯತ್ನ ನಡೆಸಿದ್ದಾರೆ. ಮುಖ್ಯಮಂತ್ರಿ ಬಿಟ್ಟರೆ ಕ್ಯಾಬಿನೆಟ್ ನಲ್ಲಿರುವ ಹಿರಿಯ ಸಚಿವ ನಾನಾಗಿದ್ದಾನೆ. ನನಗೆ ಸಾರಿಗೆ ಇಲಾಖೆಯಂತಹ ಸಣ್ಣ ಖಾತೆ ಬೇಡ. ಕಂದಾಯ ಇಲಾಖೆಯಂತಹ ಪ್ರಮುಖ ಖಾತೆ ನೀಡಬಹುದಿತ್ತು ಎಂದು ಹೇಳದ್ದಾರೆ ಎನ್ನಲಾಗಿದೆ.
ಈ ಹಿಂದೆ ನಾಲ್ಕೂವರೆ ವರ್ಷ ಸಾರಿಗೆ ಇಲಾಖೆ ನಿಭಾಯಿಸುತ್ತೇನೆ. ತನಗಿಂತ ಕಿರಿಯರಿಗೆ ಪ್ರಮುಖ ಖಾತೆ ನೀಡಲಾಗಿದೆ. ನನಗೆ ಅವಮಾನ ಆಗಿದೆ. ಅವಮಾನದಲ್ಲಿ ಮುನ್ನಡೆಯುವುದಕ್ಕಿಂತ ಸಚಿವ ಸ್ಥಾನವೇ ನನಗೆ ಬೇಡ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಅವರ ಮನವೊರಿಸಲು ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ. ಸುರೇಶ್ ಪ್ರಯತ್ನ ನಡೆಸಿದ್ದಾರೆ.