ಈ ರೋಗಗಳಿಗೆ ರಾಮ ಬಾಣ ಔಷಧ ಗುಣ ಹೊಂದಿರುವ ʼಇಂಗುʼ

ಇಂಗು-ತೆಂಗಿದ್ರೆ ಮಂಗನೂ ಅಡುಗೆ ಚೆನ್ನಾಗಿ ಮಾಡುತ್ತೆ ಎಂಬ ಗಾದೆ ಮಾತಿದೆ. ಆದರೆ, ಇಂಗು ಬರೀ ಅಡುಗೆ ಮನೆಯಲ್ಲದೆ ಔಷಧಿ ಕೋಣೆಯಲ್ಲೂ ತನ್ನ ಪರಿಮಳ ಬೀರುತ್ತದೆ. ಇಂಗಿನಲ್ಲಿರುವ ಔಷಧ ಗುಣ ಎಷ್ಟೆಲ್ಲಾ ಪ್ರಯೋಜನಕ್ಕೆ ಬರುತ್ತದೆ ನೋಡಿ.

* ಅಜೀರ್ಣ, ಗ್ಯಾಸ್ಟ್ರಿಕ್ ಮುಂತಾದ ಜಠರ ಸಂಬಂಧಿ ಕಾಯಿಲೆಗಳಿಗೆ ಇಂಗು ಪರಿಹಾರ ನೀಡುತ್ತದೆ.

* ಪಚನ ಕ್ರಿಯೆ ಹೆಚ್ಚಿಸುತ್ತದೆ. ಹುಳಿ ತೇಗು, ಹೊಟ್ಟೆಯಲ್ಲಿ ಉರಿ ಹೋಗಬೇಕಾದರೆ ಚಿಟಿಕೆ ಇಂಗು ಜೊತೆಗೆ ಮಜ್ಜಿಗೆ ಸೇವಿಸಿದರೆ ಪರಿಹಾರ ಕಂಡುಕೊಳ್ಳಬಹುದು.

* ಕ್ಯಾನ್ಸರ್ ತಗುಲಿರುವ ಕೋಶಗಳಲ್ಲಿ ವ್ಯಾಧಿ ಹೆಚ್ಚು ಹರಡದಂತೆ ತಡೆಯುವಲ್ಲಿ ಇಂಗು ಮಹತ್ತರ ಪಾತ್ರ ವಹಿಸುತ್ತದೆ.

* ಆಸ್ತಮಾ ನಿವಾರಣೆಗೆ ಸಹಕಾರಿ. ಇಂಗು, ಜೇನುತುಪ್ಪ ಹಾಗೂ ಶುಂಠಿ ಸಮಪ್ರಮಾಣದಲ್ಲಿ ಬೆರೆಸಿ ರಸ ತಯಾರಿಸಿ ಮಕ್ಕಳಿಗೆ ನೀಡುವುದರಿಂದ ಕೆಮ್ಮು ದಮ್ಮು ಬರುವುದಿಲ್ಲ.

* ಶೀತಬಾಧೆ, ಅಪಸ್ಮಾರ ಚಿಕಿತ್ಸೆಯಲ್ಲೂ ಇಂಗು ಬಳಸಲಾಗುತ್ತದೆ. ಉತ್ತೇಜನಕಾರಿಯಾಗಿ ಕೆಲಸ ಮಾಡುವ ಇಂಗಿನ ಅಂಶ, ನರಗಳಿಗೆ ಹೆಚ್ಚಿನ ಬಲ ತುಂಬುತ್ತದೆ. ಮಾನಸಿಕ ಒತ್ತಡ, ಹಿಸ್ಟೀರಿಯಾ ತೊಂದರೆಯನ್ನು ಇಂಗು ನಿವಾರಿಸಬಲ್ಲದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read