ರಾಜ್ಯಕ್ಕೆ ಕೇಂದ್ರದಿಂದ ಭರ್ಜರಿ ಗಿಫ್ಟ್: ನೂತನ ಕೇಂದ್ರ ಸಚಿವ ಸೋಮಣ್ಣ ಬಂಪರ್ ಘೋಷಣೆ

ಬೆಂಗಳೂರು: ರಾಜ್ಯದಲ್ಲಿ 30 ವರ್ಷದಿಂದ ಬಾಕಿ ಉಳಿದ 9 ರೈಲ್ವೆ ಯೋಜನೆಗಳನ್ನು ಎರಡು ವರ್ಷದಲ್ಲಿ ಪೂರ್ಣಗೊಳಿಸುವುದಾಗಿ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಬಂಪರ್ ಘೋಷಣೆ ಮಾಡಿದ್ದಾರೆ.

ರೈಲ್ವೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿಗೆ ನೈರುತ್ಯ ರೈಲ್ವೆ ಅಧಿಕಾರಿಗಳೊಂದಿಗೆ ರಾಜ್ಯದ ರೈಲ್ವೆ ಯೋಜನೆಗಳ ಸ್ಥಿತಿ ಗತಿ ಕುರಿತಾಗಿ ಸಭೆ ನಡೆಸಿದ ಸಚಿವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ರಾಜ್ಯದಲ್ಲಿ ಕಳೆದ ಮೂರು ದಶಕಗಳಿಂದ ವಿಳಂಬವಾಗಿರುವ ಸುಮಾರು 1264 ಕಿಲೋ ಮೀಟರ್ ಒಳಗೊಂಡ 9 ರೈಲ್ವೆ ಯೋಜನೆ 2025 -26ರ ಅಂತ್ಯದೊಳಗೆ ಪೂರ್ಣಗೊಳಿಸುವುದಾಗಿ ಹೇಳಿದ್ದಾರೆ.

ತುಮಕೂರು -ಕಲ್ಯಾಣದುರ್ಗ – ರಾಯದುರ್ಗ, ತುಮಕೂರು -ಚಿತ್ರದುರ್ಗ –ದಾವಣಗೆರೆ, ಗಿಣಿಗೇರಾ –ರಾಯಚೂರು, ಬಾಗಲಕೋಟ –ಕುಡಚಿ, ಗದಗ –ವಾಡಿ, ಕಡೂರು –ಚಿಕ್ಕಮಗಳೂರು, ಶಿವಮೊಗ್ಗ -ಶಿಕಾರಿಪುರ -ರಾಣೆಬೆನ್ನೂರು, ಬೆಳಗಾವಿ -ಕಿತ್ತೂರು –ಧಾರವಾಡ, ಹಾಸನ -ಬೇಲೂರು ಯೋಜನೆಗಳನ್ನು ಎರಡು ವರ್ಷದೊಳಗೆ ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ.

ಬೆಂಗಳೂರು ಉಪನಗರ ರೈಲು ಯೋಜನೆ ಕಾಮಗಾರಿ ಚುರುಕುಗೊಳಿಸಲು ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ ಮುಂದಿನ 15 ದಿನಗಳಲ್ಲಿ ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ರೈಲ್ವೆ ತಾಂತ್ರಿಕ ತಜ್ಞರ ನೇಮಕಾತಿಗೆ ಕ್ರಮ ವಹಿಸುವುದಾಗಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read