alex Certify ರಾಹುಲ್ ಗಾಂಧಿಗೆ ‘ಬಾಲ ಬುದ್ಧಿ’: ಇದುವರೆಗೆ ದಲಿತರು ಮಿಸ್ ಇಂಡಿಯಾ ಆಗಿಲ್ಲ ಎಂಬ ಹೇಳಿಕೆಗೆ ಕಿರಣ್ ರಿಜಿಜು ತಿರುಗೇಟು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಹುಲ್ ಗಾಂಧಿಗೆ ‘ಬಾಲ ಬುದ್ಧಿ’: ಇದುವರೆಗೆ ದಲಿತರು ಮಿಸ್ ಇಂಡಿಯಾ ಆಗಿಲ್ಲ ಎಂಬ ಹೇಳಿಕೆಗೆ ಕಿರಣ್ ರಿಜಿಜು ತಿರುಗೇಟು

ನವದೆಹಲಿ: ಇದುವರೆಗಿನ ಮಿಸ್ ಇಂಡಿಯಾ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಗಮನಿಸಿದ್ದೇನೆ. ಅದರಲ್ಲಿ ದಲಿತರು, ಆದಿವಾಸಿಗಳು ಅಥವಾ ಹಿಂದುಳಿದ ಸಮುದಾಯಕ್ಕೆ ಸೇರಿದ ಒಬ್ಬ ಮಹಿಳೆಯೂ ಇಲ್ಲ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಬೇಸರ ವ್ಯಕ್ತಪಡಿಸಿದ್ದಾರೆ. ಅವರ ಹೇಳಿಕೆಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಕಿರಣ್ ರಿಜಿಜು ‘ಬಾಲ ಬುದ್ಧಿ’ ಹೊಂದಿರುವ ವ್ಯಕ್ತಿಯಿಂದ ಇಂತಹ ಪ್ರಸ್ತಾಪ ಬರಬಹುದು ಎಂದು ತಿರುಗೇಟು ನೀಡಿದ್ದಾರೆ.

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಶನಿವಾರ ಸಂವಿಧಾನ ಸಮ್ಮಾನ್ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಹಿಂದುಳಿದ ಮತ್ತು ದೀನದಲಿತ ವರ್ಗಗಳನ್ನು ಕಡೆಗಣಿಸಿರುವ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಮಿಸ್ ಇಂಡಿಯಾ ಸ್ಪರ್ಧೆಗಳಲ್ಲಿ ಮೀಸಲಾತಿಯನ್ನು ಪರಿಚಯಿಸುವ ಕುರಿತಾಗಿ ಹೇಳಿಕೆ ನೀಡಿದ್ದಾರೆ.

“ನಾನು ಮಿಸ್ ಇಂಡಿಯಾ ಪಟ್ಟಿಯನ್ನು ಪರಿಶೀಲಿಸಿದೆ, ಅದರಲ್ಲಿ ದಲಿತ, ಆದಿವಾಸಿ(ಬುಡಕಟ್ಟು) ಅಥವಾ OBC(ಇತರ ಹಿಂದುಳಿದ ವರ್ಗಗಳು) ಮಹಿಳೆಯರು ಇರಲಿಲ್ಲ. ಕೆಲವರು ಕ್ರಿಕೆಟ್ ಅಥವಾ ಬಾಲಿವುಡ್ ಬಗ್ಗೆ ಮಾತನಾಡುತ್ತಾರೆ. ಮಾಧ್ಯಮದ ಪ್ರಮುಖ ಆ್ಯಂಕರ್‌ಗಳು ಕೂಡ 90 ಪ್ರತಿಶತ ಈ ವರ್ಗದಿಂದ ಬಂದವರಲ್ಲ ಎಂದು ಹೇಳಿದ್ದಾರೆ.

ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ರಾಹುಲ್ ಅವರ ವೈರಲ್ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈಗ, ರಾಹುಲ್ ಅವರು ಮಿಸ್ ಇಂಡಿಯಾ ಸ್ಪರ್ಧೆಗಳು, ಚಲನಚಿತ್ರಗಳು, ಕ್ರೀಡೆಗಳಲ್ಲಿ ಮೀಸಲಾತಿಯನ್ನು ಬಯಸುತ್ತಾರೆ. ಇದು ಕೇವಲ ‘ಬಾಲ ಬುದ್ಧಿ’ ವಿಷಯವಲ್ಲ, ಆದರೆ ಅವರನ್ನು ಹುರಿದುಂಬಿಸುವ ಜನರು ಸಹ ಅಷ್ಟೇ ಜವಾಬ್ದಾರರು! ಎಂದು ತಿಳಿಸಿದ್ದಾರೆ.

ಬಾಲಿಶ ಹಾಸ್ಯವು ಉತ್ತಮ ಮನರಂಜನೆ ಆಗಬಹುದು. ಆದರೆ ನಿಮ್ಮ ವಿಭಜಕ ತಂತ್ರಗಳಲ್ಲಿ ಹಿಂದುಳಿದ ಸಮುದಾಯಗಳನ್ನು ಗೇಲಿ ಮಾಡಬೇಡಿ ಎಂದು ಅವರು ಹೇಳಿದ್ದಾರೆ.

ರಾಹುಲ್ ಗಾಂಧಿಜೀ, ಸರ್ಕಾರಗಳು ಮಿಸ್ ಇಂಡಿಯಾ ಆಯ್ಕೆ ಮಾಡುವುದಿಲ್ಲ, ಸರ್ಕಾರಗಳು ಒಲಿಂಪಿಕ್ಸ್‌ ಗೆ ಕ್ರೀಡಾಪಟುಗಳನ್ನು ಆಯ್ಕೆ ಮಾಡುವುದಿಲ್ಲ ಮತ್ತು ಸರ್ಕಾರಗಳು ಚಲನಚಿತ್ರಗಳಿಗೆ ನಟರನ್ನು ಆಯ್ಕೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...