ರಾಗಿ ತಿಂದವನಿಗೆ ರೋಗವಿಲ್ಲ ಎಂಬುದು ಹಿಂದಿನ ಕಾಲದ ಮಾತು. ಅದರ ಮಹತ್ವ ಸಾರಲು ಇದೊಂದೇ ವಾಕ್ಯ ಸಾಕಲ್ಲವೇ…?
ರಾಗಿ ಹಿಟ್ಟನ್ನು ನೀರಲ್ಲಿ ಕಲಸಿ ಕುದಿಯುವ ನೀರಿಗೆ ಕಲಸಿದ ರಾಗಿಯ ಹಿಟ್ಟನ್ನು ಹಾಕಿ ಕುದಿಸಿ. ಅದಕ್ಕೆ ಬೆಲ್ಲ, ಏಲಕ್ಕಿ, ಲವಂಗ ಹಾಕಿ. ತುಪ್ಪದಲ್ಲಿ ಹುರಿದ ಗೋಡಂಬಿ ಬಾದಾಮಿ ಹಾಕಿ ಬೆಳಿಗ್ಗೆ, ಸಂಜೆ ಕುಡಿಯಿರಿ.
ಇದು ದೇಹಕ್ಕೆ ತಂಪುಂಟು ಮಾಡುತ್ತದೆ. ಸಕ್ಕರೆ ಕಾಯಿಲೆ ಇರುವವರಿಗೂ ಇದು ಒಳ್ಳೆಯದು. ಹಾಗೇ ದೇಹಕ್ಕೆ ಬಲ ಕೊಡುತ್ತದೆ.
ರಾಗಿ ತೂಕವನ್ನು ಜಾಸ್ತಿ ಮಾಡುವುದಿಲ್ಲ. ದೇಹದಲ್ಲಿ ಇರುವ ಉಷ್ಣಾಂಶವನ್ನು ಕಡಿಮೆ ಮಾಡುತ್ತದೆ. ಮಕ್ಕಳಿಗಂತೂ ರಾಗಿ ಮಾಲ್ಟ್ ಬಹಳ ಒಳ್ಳೆಯದು. ಬಾಣಂತಿಯರಿಗೂ ಇದು ಹೇಳಿ ಮಾಡಿಸಿದ ಪಾನೀಯ.
ಎಳೆ ಮಕ್ಕಳಿಗೆ ಆಹಾರ ತಿನ್ನಲು ಕೊಡುವುದಕ್ಕಿಂತ ಮೊದಲು ರಾಗಿ ಗಂಜಿಯನ್ನು ಕೊಡುವುದು ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು.