ಆಪ್ ನಾಯಕ ರಾಘವ್ ಚಡ್ಡಾ ಹಾಗೂ ನಟಿ ಪರಿಣಿತಿ ಚೋಪ್ರಾ ಉದಯಪುರದ ಲೀಲಾ ಪ್ಯಾಲೇಸ್ನಲ್ಲಿ ಅದ್ಧೂರಿ ವಿವಾಹ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಈ ವಿವಾಹ ಕಾರ್ಯಕ್ರಮದಲ್ಲಿ ತಾರಾಗಣ ಹಾಗೂ ರಾಜಕೀಯ ನಾಯಕರ ಸಮಾಗಮವಾಗಿತ್ತು.
ಮೇ 13ರಂದು ದೆಹಲಿಯಲ್ಲಿ ಪರಿಣಿತಿ ಚೋಪ್ರಾ ಖಾಸಗಿ ಸಮಾರಂಭವೊಂದರಲ್ಲಿ ರಾಘವ್ ಚಡ್ಡಾರಿಗೆ ಪ್ರಪೋಸ್ ಮಾಡಿದ್ದರು. ನಿಶ್ಚಿತಾರ್ಥದ ಬಗ್ಗೆ ನಟಿ ಪರಿಣಿತಿ ಚೋಪ್ರಾ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಶೇರ್ ಮಾಡಿದ್ದರು.
ರಾಘವ್ ಹಾಗೂ ಪರಿಣಿತಿ ಲಂಡನ್ನಲ್ಲಿ ಶಾಲೆಗೆ ತೆರಳಿದ್ದರು. ಬಹಳ ಸಮಯದಿಂದ ಒಬ್ಬರನ್ನೊಬ್ಬರು ಅರಿತಿದ್ದಾರೆ. 2014ರ ಲೇಖನವೊಂದರಲ್ಲಿ ಸಿಕ್ಕ ಮಾಹಿತಿಯ ಪ್ರಕಾರ, ಪರಿಣಿತಿ ಮ್ಯಾಂಚೆಸ್ಟರ್ ಮ್ಯಾನೇಜ್ಮೆಂಟ್ ಸ್ಕೂಲ್ನಿಂದ ಮ್ಯಾನೇಜ್ಮೆಂಟ್, ಫೈನಾನ್ಸ್ ಹಾಗೂ ಅರ್ಥಶಾಸ್ತ್ರದಲ್ಲಿ ಟ್ರಿಪಲ್ ಆನರ್ಸ್ ಪದವಿ ಪಡೆದುಕೊಂಡಿದ್ದಾರೆ. ಲಂಡನ್ನಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಪರಿಣಿತಿ ಹಾಗೂ ರಾಘವ್ ಒಬ್ಬರಿಗೊಬ್ಬರು ಸ್ನೇಹಿತರು ಎನ್ನಲಾಗಿದೆ. ರಾಘವ್ ಚಡ್ಡಾ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ವ್ಯಾಸಂಗ ಮಾಡಿದ್ದಾರೆ.
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಭಗವಂತ್ ಮಾನ್, ಆದಿತ್ಯ ಠಾಕ್ರೆ ಸೇರಿದಂತೆ ಹಲವು ರಾಜಕೀಯ ನಾಯಕರು ಉದಯಪುರದಲ್ಲಿ ರಾಘವ್ ಚಡ್ಡಾ – ಪರಿಣಿತಿ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮನೀಷ್ ಮಲ್ಹೋತ್ರಾ, ಸಾನಿಯಾ ಮಿರ್ಜಾ, ಹರ್ಭಜನ್ ಸಿಂಗ್ ಸೇರಿದಂತೆ ಹಲವರು ಮದುವೆ ಕಾರ್ಯಕ್ರಮದಲ್ಲಿ ಹಾಜರಿದ್ದರು.