BIG NEWS: ಚನ್ನಪಟ್ಟಣ ಉಪಚುನಾವಣೆ: ಜೆಡಿಎಸ್‌ನದ್ದೇ ಕ್ಷೇತ್ರವಾಗಿದ್ದರಿಂದ ಅವರ ಸಲಹೆಯೇ ಪ್ರಮುಖವಾಗಿದೆ: ಆರ್. ಅಶೋಕ್

ಬೆಂಗಳೂರು: ಚನ್ನಪಟ್ಟಣ ಜೆಡಿಎಸ್‌ನ ಕ್ಷೇತ್ರವೇ ಆಗಿದ್ದರಿಂದ ಅವರ ಸಲಹೆಯೇ ಪ್ರಮುಖ ಎಂದು ವಿಪಕ್ಷ ನಾಯಕ ಆರ್‌.ಅಶೋಕ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಸಿ.ಪಿ.ಯೋಗೇಶ್ವರ್‌ ಅವರ ಮನವೊಲಿಸಲು ನಾನು ಕೂಡ ಯತ್ನಿಸಿದ್ದೆ. ಚನ್ನಪಟ್ಟಣ ಕ್ಷೇತ್ರದ ಟಿಕೆಟ್‌ ಸಂಬಂಧ ಇನ್ನೂ ಅಂತಿಮ ನಿರ್ಧಾರ ಆಗಿಲ್ಲ. ಯೋಗೇಶ್ವರ್‌ ಅವರಿಗೆ ಟಿಕೆಟ್‌ ನೀಡಬೇಕೆಂದು ಹಿರಿಯ ನಾಯಕರಿಗೆ ಮನವಿ ಮಾಡಿದ್ದೇವೆ. ಈ ಹಿಂದೆ ಕ್ಷೇತ್ರದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಶಾಸಕರಾಗಿದ್ದು, ಅವರ ತೀರ್ಮಾನ ಪ್ರಮುಖವಾಗಿರುತ್ತದೆ. ಯೋಗೇಶ್ವರ್‌ ಅವರು ದುಡುಕುತ್ತಾರೆ ಅಥವಾ ತಪ್ಪು ತೀರ್ಮಾನ ಕೈಗೊಳ್ಳುತ್ತಾರೆಂದು ನನಗೆ ಅನ್ನಿಸುತ್ತಿಲ್ಲ. ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿಗೆ ಟಿಕೆಟ್‌ ಸಿಗಬಹುದು ಎಂದರು.

ನಿಖಿಲ್‌ ಕುಮಾರಸ್ವಾಮಿ ಅವರು ಈಗಾಗಲೇ ಸ್ಪರ್ಧೆ ಮಾಡಲ್ಲ ಎಂದು ಹೇಳಿದ್ದಾರೆ. ಸೀಟು ಅವರದ್ದೇ ಆಗಿರುವುದರಿಂದ ಹಾಗೂ ಎನ್‌ಡಿಎ ಪಾರ್ಟ್‌ನರ್‌ ಆಗಿರುವುದರಿಂದ ಜೆಡಿಎಸ್‌ನವರ ಸಲಹೆ ಪ್ರಮುಖವಾಗಿರುತ್ತದೆ. ಇನ್ನು ಎರಡು ದಿನದಲ್ಲಿ ಎಲ್ಲವೂ ತೀರ್ಮಾನವಾಗಲಿದೆ ಎಂದು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read