‘ಸ್ಪಾ’ ಹೆಸರಿನಲ್ಲಿ ನಡೆಯುತ್ತಿತ್ತು ವೇಶ್ಯಾವಾಟಿಕೆ; ಪೊಲೀಸರ ದಾಳಿ ವೇಳೆ ಸಿಕ್ಕಿ ಬಿದ್ದಿದ್ದು ಯಾರು ಗೊತ್ತಾ ?

ಶಿವಮೊಗ್ಗ ನಗರದ ವಿನೋಬ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ವೀರಣ್ಣ ಲೇಔಟ್ ಮೂರನೇ ಕ್ರಾಸ್ ನಲ್ಲಿರುವ ‘ಲೈರಾ ಮೇಕ್ ಓವರ್ ಸ್ಟುಡಿಯೋ ಸಲೂನ್ ಅಂಡ್ ಸ್ಪಾ’ ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ದೂರಿನ ಮೇರೆಗೆ ಪೊಲೀಸರು ಸೋಮವಾರ ಸಂಜೆ ದಾಳಿ ನಡೆಸಿದ್ದಾರೆ.

ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಭೂಮಾರೆಡ್ಡಿ, ಎ.ಜಿ. ಕಾರಿಯಪ್ಪ ಅವರ ಮಾರ್ಗದರ್ಶನದಲ್ಲಿ ಶಿವಮೊಗ್ಗ ಉಪ ವಿಭಾಗ ಡಿವೈಎಸ್ಪಿ ಸುರೇಶ್ ಮೇಲ್ವಿಚಾರಣೆಯಲ್ಲಿ, ವಿನೋಬಾ ನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಶ್ರೀಮತಿ ಚಂದ್ರಕಲಾ ಹಾಗೂ ಮಹಿಳಾ ಠಾಣೆ ಇನ್ಸ್ಪೆಕ್ಟರ್ ಭರತ್ ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿ ಇಬ್ಬರು ಸಂತ್ರಸ್ತ ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ.

ಅಲ್ಲದೆ ವೇಶ್ಯಾವಾಟಿಕೆ ನಡೆಸುತ್ತಿದ್ದ ‘ಲೈರಾ ಮೇಕ್ ಓವರ್ ಸ್ಟುಡಿಯೋ ಸಲೂನ್ ಅಂಡ್ ಸ್ಪಾ’ ಮಾಲೀಕರಾದ 33 ವರ್ಷದ ಸೌಮ್ಯ ಕೋಂ ಪ್ರಭು ಎಂಬವರನ್ನು ಬಂಧಿಸಿ immoral traffic prevention act ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read