ಆಸ್ತಿ ತೆರಿಗೆ ಪಾವತಿದಾರರಿಗೆ ಗುಡ್ ನ್ಯೂಸ್: ಶೇ.5 ರಿಯಾಯಿತಿ, ಹೆಚ್ಚುವರಿ ಕೌಂಟರ್, ಆನ್ಲೈನ್ ಪಾವತಿ ಸೌಲಭ್ಯ

ಶಿವಮೊಗ್ಗ: ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿಗೆ ಅನುಕೂಲವಾಗುವಂತೆ ಪಾಲಿಕೆ ಕಚೇರಿಯ ಆವರಣದಲ್ಲಿ ಹೆಚ್ಚುವರಿ ಕೌಂಟರ್‌ ಗಳನ್ನು ಪ್ರಾರಂಭ ಮಾಡಲಾಗಿದ್ದು, ಸಾರ್ವಜನಿಕರು ನೇರವಾಗಿ ಕಚೇರಿಯಲ್ಲಿ ಆಸ್ತಿ ತೆರಿಗೆ ಪಾವತಿಸಲು ಅವಕಾಶವಿರುತ್ತದೆ.

ಅಲ್ಲದೇ ಈಗಾಗಲೇ ಜಾರಿಯಲ್ಲಿರುವಂತೆ ಆಸ್ತಿ ತೆರಿಗೆ ಪಾವತಿಯನ್ನು ಮಹಾನಗರಪಾಲಿಕೆಯ ವೆಬ್‌ಸೈಟ್ ವಿಳಾಸ www.shivamoggacitycorp.org ಮುಖಾಂತರ ಆನ್‌ಲೈನ್‌ನಲ್ಲಿ ಹಾಗೂ ಯುಪಿಐ/ನೆಟ್‌ಬ್ಯಾಂಕಿಂಗ್/ ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್ ವ್ಯವಸ್ಥೆಯಡಿಯಲ್ಲಿ ಆಸ್ತಿ ತೆರಿಗೆ ಪಾವತಿ ಮಾಡಬಹುದಾಗಿರುತ್ತದೆ. ವಿಶೇಷವಾಗಿ 2025-26 ರ ಖಾತೆದಾರರಿಗೆ ಇಡಿಸಿ(ಪಿಓಎಸ್) ಯಂತ್ರಗಳ ಮೂಲಕ ಸ್ವತಿನ ಆಸ್ತಿ ತೆರಿಗೆಯನ್ನು ಪಾವತಿಸಿದ ರಸೀದಿಯನ್ನು ನೀಡಲಾಗುತ್ತದೆ.

2025-26ನೇ ಸಾಲಿನ ಆಸ್ತಿ ತೆರಿಗೆ ಪಾವತಿದಾರರು ಏಪ್ರಿಲ್ 2025ರೊಳಗಾಗಿ ಪಾವತಿಸಿದ್ದಲ್ಲಿ ಶೇ. 5 ರಷ್ಟು ತೆರಿಗೆ ವಿನಾಯಿತಿಯನ್ನು ನೀಡಲಾಗುವುದು. ಜೂನ್ 2025 ರ ಅಂತ್ಯದವರೆಗೆ ದಂಡವಿಲ್ಲದೆ ಪಾವತಿಸಬಹುದು ಹಾಗೂ ಜುಲೈ 1 ರಿಂದ ಪ್ರತಿ ತಿಂಗಳಿಗೆ ಶೇ. 2 ರಂತೆ ದಂಡ ಪಾವತಿಸಬೇಕಾಗಿರುತ್ತದೆ.

ಸಾರ್ವಜನಿಕರು ಏಪ್ರಿಲ್ ತಿಂಗಳಲ್ಲೇ ಆಸ್ತಿ ತೆರಿಗೆ ಪಾವತಿಸಿ ರಿಯಾಯಿತಿ ಪಡೆಯುವಂತೆ ಹಾಗೂ ಆಸ್ತಿ ತೆರಿಗೆ ಪಾವತಿಸಿ ನಗರದ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸುವಂತೆ ಎಂದು ಶಿವಮೊಗ್ಗ ಮಹಾನಗರಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read